ಕೊಡಗು ಸೈನಿಕ ಶಾಲೆಗೆ ಸೇರ್ಪಡೆಗೆ ರ್ಜಿ ಆಹ್ವಾನ

ಉಡುಪಿ: ಕೊಡಗು ಸೈನಿಕ ಶಾಲೆಗೆ 2014 - 15ನೇ ಸಾಲಿಗೆ 6 ಮತ್ತು 9ನೇ ತರಗತಿ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅರ್ಜಿ ಆಹ್ವಾನಿಸಲಾಗಿದೆ.
    6ನೇ ತರಗತಿಗೆ 10 - 11 ವರ್ಷದೊಳಗಿನ ಮತ್ತು 9ನೇ ತರಗತಿಗೆ 13ರಿಂದ 14 ವರ್ಷದೊಳಗಿನ ಕರ್ನಾಟಕದಲ್ಲಿ ವಾಸಿಸುತ್ತಿರುವ/ರಕ್ಷಣಾ ಪಡೆ ಸಿಬಂದಿ ಮಕ್ಕಳು ಅರ್ಹತೆ ಹೊಂದಿರುತ್ತಾರೆ. ಆಸಕ್ತರು ಡಿ. 7ರ ಒಳಗಾಗಿ ಪ್ರಾಚಾರ್ಯರು, ಸೈನಿಕ ಶಾಲೆ, ಅಂಚೆ ಕೂಡಿಗೆ, ಸೋಮವಾರಪೇಟೆ, ಕೊಡಗು ಜಿಲ್ಲೆ - ಇವರಿಗೆ ಅರ್ಜಿ ಸಲ್ಲಿಸಬಹುದು.
        ಅರ್ಹತಾ ಲಿಖೀತ ಪರೀಕ್ಷೆಯನ್ನು 2014ರ ಜ. 5ರಂದು ಬೆಂಗಳೂರು, ದಾವಣಗೆರೆ, ಮೈಸೂರು ಸೈನಿಕ ಶಾಲೆ, ಕೊಡಗಿನಲ್ಲಿ 6ನೇ ತರಗತಿಗೆ ಮತ್ತು ಕೊಡಗಿನಲ್ಲಿ 9ನೇ ತರಗತಿಗೆ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com