ಮಕ್ಕಳಲ್ಲಿ ಸಾಮಾಜಿಕ ಅನಿಷ್ಟದ ಅರಿವು ಮೂಡಿಸಬೇಕಿದೆ:ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌

ಕೋಟ: ಇಂದು ನಾವು ಸಾಮಾಜಿಕ, ಕೌಟುಂಬಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕೃತಿ, ಸಂಸ್ಕಾರದ ಕುರಿತು ತಿಳುವಳಿಕೆ ಮೂಡಿಸಿದರೆ ಈ ಸಾಮಾಜಿಕ ಅನಿಷ್ಟಗಳನ್ನು ದೂರಮಾಡಲು ಸಾಧ್ಯ ಎಂದು ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹೇಳಿದರು.
     ಅವರು ಕೋಟತಟ್ಟು ಗ್ರಾಮಪಂಚಾಯತ್‌ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಡಾ| ಶಿವರಾಮ ಕಾರಂತ ಟ್ರಸ್ಟ್‌, ಕೋಟದ ಡಾ| ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನದ ಸಹಯೋಗದಲ್ಲಿ ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಮಂಗಳವಾರ ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆದ ಮಹಾತ್ಮ ಗಾಂಧೀ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜನ್ಮದಿನಾಚರಣೆ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಗಾರ ಉದ್ಘಾಟಿಸಿ   ಮಾತನಾಡಿದರು.
  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೋಟ ವಲಯ, ಜನಜಾಗೃತಿ ವೇದಿಕೆ ಕೋಟ ವಲಯ ಪ್ರಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಾಹಿನೀ ಯುವಕ ಮಂಡಲದ ಅಧ್ಯಕ್ಷ ರಮೇಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.
    ಕಾರ್ಯಕ್ರಮದಲ್ಲಿ ಸ್ವ - ಉದ್ಯೋಗ ಅವಕಾಶ, ಔಷಧ ಗಿಡಮೂಲಿಕೆಗಳು ಎಂಬ ವಿಚಾರದಲ್ಲಿ ಪಿ. ಮಂಜುನಾಥ ಉಪಾಧ್ಯ, ಆರೂರು ಮಂಜುನಾಥ ಆರ್‌. ಮಾಹಿತಿ ನೀಡಿದರು.
      ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮ ಪಂಚಾಯತ್‌ ಅಧ್ಯಕ್ಷ ಶಿವಪೂಜಾರಿ, ಪ್ರಶಸ್ತಿ ಪ್ರಧಾನ ಸಮಿತಿ ಕಾರ್ಯಧ್ಯಕ್ಷ ಆನಂದ್‌ ಸಿ. ಕುಂದರ್‌, ಜನಜಾಗೃತಿ ವೇದಿಕೆ ಅಧ್ಯಕ್ಷ ಅಚ್ಯುತ್‌ ಪೂಜಾರಿ, ಯೋಜನೆಯ ಕೋಟ ವಲಯ ಮೇಲ್ವಿಚಾರಕಿ ಸುಮಿತ್ರಾ, ಪಂಚಾಯತ್‌ ಸದಸ್ಯ ರಘು ತಿಂಗಳಾಯ, ಅಣ್ಣಪ್ಪ, ಆನಂದ ಶೆಟ್ಟಿ, ಸಂಜೀವ ಮರಕಾಲ, ಸುಧೀಂದ್ರ ಐತಾಳ, ಲತಾ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್‌ ಕಾರ್ಯದರ್ಶಿ ಮೀರಾ ಸ್ವಾಗತಿಸಿ, ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವಿಕವಾಗಿ ಮಾತನಾಡಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com