ಎಚ್‌ಐವಿ ಬಾಧಿತ ಮಕ್ಕಳ ವಿಶೇಷ ಶಿಬಿರ ಉದ್ಘಾಟನೆ

ಕುಂದಾಪುರ: ಎಚ್‌ಐವಿ ಬಾಧಿತ ಮಕ್ಕಳ ಬಗೆಗಿನ ದಷ್ಟಿಕೋನ ಬದಲಾಗಬೇಕಾಗಿದೆ. ತಮ್ಮದಲ್ಲದ ತಪ್ಪಿಗೆ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರಿಗೆ ಸಮಾಜ ಪ್ರೀತ್ಯಾದರ ತೋರಬೇಕು ಎಂದು ರೋಟರಿ ಸಹಾಯಕ ಗವರ್ನರ್, ಯುವ ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು. 

ಇಲ್ಲಿನ ಹೋಟೆಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ, ರೋಟರಿ ಕ್ಲಬ್ ದಕ್ಷಿಣ ಕುಂದಾಪುರ, ಪಡಿ(ವೆಲೊರೆಡ್) ಮಂಗಳೂರು, ರೋಟರಿ ಕ್ಲಬ್ ಕೋಟೇಶ್ವರ, ಸ್ಫೂರ್ತಿ ಗ್ರಾಮೀಣಾಭಿವದ್ಧಿ ಮತ್ತು ತರಬೇತಿ ಸಂಸ್ಥೆ ಕೋಟೇಶ್ವರ ಹಾಗೂ ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಎಚ್‌ಐವಿ ಬಾಧಿತ ಮಕ್ಕಳ ವಿಶೇಷ ಶಿಬಿರ ಅರಳು-2013 ಉದ್ಘಾಟಿಸಿ ಅವರು ಮಾತನಾಡಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ ಮಾತನಾಡಿ, ಸರಕಾರ ಎಚ್‌ಐವಿ ಬಾಧಿತ ಮಕ್ಕಳ ನೆರವಿಗೆ ನಿಲ್ಲಬೇಕಾಗಿದೆ. ಅವರಿಗೆ ಪ್ರತ್ಯೇಕ ಅನುದಾನ ಘೋಷಿಸಬೇಕು. ಅವರ ಸಂರಕ್ಷಣೆಯ ಹೊಣೆಭಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಸಂಪನ್ಮೂಲ ವ್ಯಕ್ತಿ ಜಯಶ್ರೀ ಭಟ್ ಮಾತನಾಡಿ, ಎಚ್‌ಐವಿ ಪೀಡಿತರ ಬಗ್ಗೆ ಮಾಧ್ಯಮದವರು ಚೆನ್ನಾಗಿ ಅರಿತುಕೊಂಡು ಅವರ ಪೊ್ರೀೀತ್ಸಾಹಕ್ಕೆ ಮುಂದಾಗಬೇಕು ಎಂದರು. 

ಸ್ಫೂರ್ತಿ ಗ್ರಾಮೀಣಾಭಿವದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ಡಾ.ಕೇಶವ ಕೋಟೇಶ್ವರ ಮಾತನಾಡಿ, ಎಚ್‌ಐವಿ ಪೀಡಿತ ಮಕ್ಕಳಿಗೆ ಸಾಂತ್ವನ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸ್ಫೂರ್ತಿ. ಉಡುಪಿ ಜಿಲ್ಲೆಯಲ್ಲಿ 257 ಎಚ್‌ಐವಿ ಪೀಡಿತ ಮಕ್ಕಳಿದ್ದಾರೆ. ಅವರಲ್ಲಿ 157 ಮಂದಿ ಕುಂದಾಪುರ ತಾಲೂಕಿನಲ್ಲಿಯೇ ಇದ್ದಾರೆ. ಎಚ್‌ಐವಿ ಅಥವಾ ಏಡ್ಸ್ ಒಂದು ಕಾಯಿಲೆಯಲ್ಲ. ಎಚ್‌ಐವಿ ವೆರಸ್ ದೇಹದೊಳಗೆ ಪ್ರವೇಶಿಸಿ ಬಿಳಿರಕ್ತಕಣಗಳನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ನಡೆಸುತ್ತದೆ. ಇದರ ತಡೆಗಟ್ಟುವಿಕೆಗಾಗಿ ಬಹಳಷ್ಟು ಸಂಶೋಧನೆ ನಡೆಯುತ್ತದೆ. ದೇಹದಲ್ಲಿನ ಬಿಳಿರಕ್ತಕಣಗಳ ಸಂರಕ್ಷಣೆ, ನಿಯಂತ್ರಣಕ್ಕೆ ಒತ್ತು ನೀಡಿದಾಗ ಎಲ್ಲರಂತೆ ಇವರು ಅರಾಮವಾಗಿ ಬದುಕಬಲ್ಲರು. ಎಚ್‌ಐವಿ ಪೀಡಿತರ ಕಲ್ಯಾಣಕ್ಕಾಗಿ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ, ಉಡುಪಿ ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ.ಶ್ರೇಯಾನ್ ಮಾತನಾಡಿ ಎಚ್‌ಐವಿ ಪೀಡಿತ ಮಕ್ಕಳ ನೆರವಿಗೆ ಹೋರಾಟ ನಡೆಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಎಚ್‌ಐವಿ ಪೀಡಿತ ಮಕ್ಕಳು ಕೇಶವ ಕೋಟೇಶ್ವರ ಅವರನ್ನು ಸನ್ಮಾನಿಸಿದರು. 

ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ ಕುಂಭಾಸಿ ಶುಭಹಾರೈಸಿದರು. ಹುಸೇನ್ ಹೈಕಾಡಿ ಸ್ವಾಗತಿಸಿದರು. ಪ್ರಮೀಳಾ ಜೆ.ವಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಾಬು ಪೆ ಕಾರ್ಯಕ್ರಮ ನಿರ್ವಹಿಸಿದರು. ಸಂಜೀವ ವಂಡ್ಸೆ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com