ತಾಲೂಕಿನಾದ್ಯಂತ ಉತ್ತಮ ಮಳೆ

ಕುಂದಾಪುರ: ತಾಲೂಕಿನಾದ್ಯಂತ ನಿನ್ನೆ ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿದ್ದು, ಸಿದ್ದಾಪುರ, ಹೊಸಂಗಡಿ, ಮಡಾಮಕ್ಕಿ, ಗೋಳಿಯಂಗಡಿ, ಹಳ್ಳಿಹೊಳೆ, ಅಮಾಸೆಬೈಲು, ಅಂಪಾರು, ಶಂಕರನಾರಾಯಣ, ವಂಡ್ಸೆ, ಕೆರಾಡಿ, ಬೆಳ್ಳಾಲ, ಕೊಲ್ಲೂರು, ಜಡ್ಕಲ್‌ಗ‌ಳಲ್ಲಿ ಮಧ್ಯಾಹ್ನದ ಅನಂತರ ಗುಡುಗು - ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗಿದೆ.
     ಮಧ್ಯಾಹ್ನ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗಿದ್ದು, ಅಂಪಾರು ಗ್ರಾ. ಪಂ. ವ್ಯಾಪ್ತಿಯ ಗುಡಿಬೆಟ್ಟು ಹಡಬಿನಗದ್ದೆ ಜಲಜಾಕ್ಷಿ ಶೆಡ್ತಿ ಅವರ ಮನೆ ಹಾಗೂ ದನದ ಕೊಟ್ಟಿಗೆಯ ಛಾವಣಿ ಮಳೆ, ಗಾಳಿಗೆ ಹಾರಿಹೋಗಿ ಅಪಾರ ಹಾನಿ ಸಂಭವಿಸಿದೆ. ಶಂಕರನಾರಾಯಣ ಗ್ರಾ. ಪಂ. ವ್ಯಾಪ್ತಿಯ ಕಲ್ಲುಗದ್ದೆ ಕಾಸನಬಳ್ಳಿ ಹಿರಿಯಣ್ಣ ಹೆಗ್ಡೆ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್‌ ಉಪಕರಣಗಳು ಸೇರಿದಂತೆ ಮೀಟರ್‌ ಬೋರ್ಡ್‌ ಹಾಗೂ ವಯರಿಂಗ್‌ಗಳಿಗೆ ಹಾನಿ ಉಂಟಾಗಿದೆ. ಅಲ್ಲದೇ ಮನೆಯ ಗೋಡೆ ಬಿರುಕು ಬಿಟ್ಟಿದೆ.
     ಬೈಂದೂರು, ಶಿರೂರು, ಉಪ್ಪುಂದ, ಮರವಂತೆ ಹಾಗೂ ಗಂಗೊಳ್ಳಿಗಳಲ್ಲಿ ಬೆಳಗ್ಗಿನಿಂದ ಮೋಡದ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಮಳೆ ಸಿಂಚನವಾಗಿದೆ. ಕುಂದಾಪುರ, ಕೋಟೇಶ್ವರ, ಬಸ್ರೂರು, ಕೋಡಿ ಸೇರಿದಂತೆ ಈ ಭಾಗದಲ್ಲಿ ತುಂತುರು ಮಳೆಯಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com