ಗರ್ಭ ಧರಿಸಿದ ಚೀನದ 2 ವರ್ಷದ ಬಾಲಕ!

ಮಹಿಳೆಯರು ಗರ್ಭ ಧರಿಸುವುದು ಸಹಜ. ಆದರೆ ಪುರುಷರು! ಅದರಲ್ಲೂ ಎರಡು ವರ್ಷದ ಪುಟ್ಟ ಕಂದಮ್ಮನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾದ ವಿಚಿತ್ರ ಘಟನೆ ಚೀನದಲ್ಲಿ ನಡೆದಿದೆ.

ಇಲ್ಲಿನ ಹ್ಯೂಕ್ಸಿ ನಗರದ 2 ವರ್ಷದ ಬಾಲಕನ ಹೊಟ್ಟೆ ಇತ್ತೀಚಿಗೆ ದಿನೇ ದಿನೇ ಊದತೊಡಗಿತ್ತು. ಬರಬರುತ್ತಾ ಬಾಲಕನಿಗೆ ಉಸಿರಾಡುವುದೇ ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಸ್ಕ್ಯಾನಿಂಗ್‌ ಮಾಡಿದ ವೈದ್ಯರಿಗೆ ಶಾಕ್‌ ಕಾದಿತ್ತು. ಕಾರಣ, ಬಾಲಕನ ಹೊಟ್ಟೆಯಲ್ಲಿ ಇನ್ನೂ ಪೂರ್ಣವಾಗಿ ಬೆಳವಣಿಗೆ ಹೊಂದದ ಭ್ರೂಣ ಕಂಡುಬಂದಿತ್ತು.

ಬಾಲಕನ ಅವಳಿ ಆಗಬೇಕಿದ್ದ ಈ ಭ್ರೂಣವು, ತಾಯಿಯ ಗರ್ಭದಲ್ಲೇ ಬಾಲಕನ ಹೊಟ್ಟೆ ಸೇರಿ ಈ ಅವಾಂತರವಾಗಿತ್ತು. ಇತ್ತೀಚೆಗೆ ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಭ್ರೂಣವನ್ನು ಹೊರತೆಗೆದು, ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com