ಆತ್ಮ ದೇಹದಿಂದ ಹೊರ ಹೋಗುವ ದೃಶ್ಯ ಸೆರೆಹಿಡಿದ ವಿಜ್ಞಾನಿಗಳು..!

ಮಾಸ್ಕೋ: ಮಾನವನ ದೇಹದಲ್ಲಿ ಆತ್ಮ ಇರುವವರೆಗೆ ಮಾತ್ರ ಮನುಷ್ಯ ಜೀವಂತವಾಗಿರುತ್ತಾನೆ ಎಂಬ ನಂಬಿಕೆ ಇದೆ. ಆತ್ಮ ಮತ್ತು ದೇಹಗಳೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆತ್ಮವೇ ಮನುಷ್ಯನ ದೇಹಕ್ಕೆ ಜೀವ ತುಂಬುವುದು. ಆದರೆ, ದೇಹಕ್ಕೆ ಜೀವ ತುಂಬುವ ಆತ್ಮ, ದೇಹವನ್ನ ಬಿಟ್ಟುಹೋಗುವ ಘಳಿಗೆ ಯಾರ ಗಮನಕ್ಕೂ ಬರುವುದಿಲ್ಲ, ಯಾಕೆಂದರೆ ಅದು ಪ್ರಕೃತಿಯ ರಹಸ್ಯ ಪ್ರಕ್ರಿಯೆ, ಆತ್ಮವೆಂಬುದು ದೈವಾಂಶ ಸಂಭೂತವಾಗಿದ್ದು ಎಂಬ ಮಾತಿದೆ. ಆದರೆ, ರಷ್ಯಾ ವಿಜ್ಞಾನಿಗಳು ಪ್ರಕೃತಿಯ ರಹಸ್ಯವನ್ನೇ ಬೇಧಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಹೌದು, ಮನುಷ್ಯ ಮೃತನಾದಾಗ ಆತ್ಮ ದೇಹದಿಂದ ಹೊರಹೋಗುವ ದೃಶ್ಯಗಳನ್ನ ಸೆರೆಹಿಡಿದಿದ್ದಾಗಿ ರಷ್ಯಾದ ಪೀಟರ್ಸ್ ಬರ್ಗ್ ನ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಫಿಸಿಕಲ್ ಕಲ್ಚರ್ ಸಂಸ್ಥೆಯ ವಿಜ್ಞಾನಿ ಕೊರೊತ್ಕೋವ್ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಆತ್ಮ ದೇಹದಿಂದ ಹೊರಹೋಗುವ ದೃಶ್ಯಾವಳಿಗಳನ್ನ ಪ್ರಪಂಚದ ಮುಂದಿಟ್ಟಿದ್ದಾನೆ.
ಎಡಬದಿಯ ಚಿತ್ರದಲ್ಲಿ ಕಾಣುವ ದೇಹದ ತುಂಬೆಲ್ಲ ಆವೃತ್ತವಾಗಿರುವ ನೀಲಿಬಣ್ಣ ಆತ್ಮ. ಬಲಬದಿಯ ಚಿತ್ರದಲ್ಲಿರುವ ದೇಹ, ಆತ್ಮ ಹೊರಹೋಗಿರುವ ಮೃತ ದೇಹ. ಇಲ್ಲಿ ನೀಲಿಯಾಕಾರ ಚಿಹ್ನೆಗಳು ಕಾಣುವುದಿಲ್ಲ. ಮೊದಲು ತಲೆ ಮತ್ತು ನಾಭಿಯಿಂದ ಹೊರಡುವ ಆತ್ಮ ಕ್ರಮೇಣ ದೇಹದಿಂದ ಹೊರಹೋಗುತ್ತೆ. ಅಂತಿಮವಾಗಿ ಹೃದಯಭಾಗದಿಂದ ಬಿಡುಗಡೆ ಪಡೆಯುತ್ತೆ ಎನ್ನುತ್ತಾರೆ ವಿಜ್ಞಾನಿಗಳು.
ಇನ್ನೇನು ಸಾವಿನ ಸಮೀಪದಲ್ಲಿರುವ ವ್ಯಕ್ತಿಯ ದೇಹವನ್ನ `ಗ್ಯಾಸ್ ಡಿಸ್ಚಾರ್ಜ್ ವಿಶ್ಯೂಲೈಸೇಶನ್' ವಿಧಾನವನ್ನ ಅಳವಡಿಸಿದ್ದ `ಬಯೋಎಲೆಕ್ಟ್ರೋಗ್ರಾಫಿಕ್ಸ್ ಕ್ಯಾಮೆರಾ' ಮೂಲಕ ಚಿತ್ರೀಕರಿಸುವ ಮೂಲಕ ಆತ್ಮ ದೇಹದಿಂದ ಹೊರ ಹೋಗುವ ದೃಶ್ಯವನ್ನ ಸೆರೆ ಹಿಡಿದಿರುವುದಾಗಿ ವಿಜ್ಞಾನಿ ಕೊರೊತ್ಕೋವ್ ಹೇಳಿಕೊಂಡಿದ್ದಾನೆ.
ಕೃಪೆ: ಸುವರ್ಣ ನ್ಯೂಸ್
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com