ಕನ್ನಡ - ಸಂಸ್ಕೃತಿ ಇಲಾಖೆ: ಅರ್ಜಿ ಆಹ್ವಾನ

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಕಟಿತ ಗ್ರಂಥಗಳು: 2012ನೇ ಸಾಲಿನಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟವಾದ ಸೃಜನೇತರ ಕನ್ನಡ ಗ್ರಂಥಗಳಿಗೆ ಧನಸಹಾಯ ನೀಡಲಾಗುವುದು. ಪಠ್ಯಪುಸ್ತಕಗಳು, ಕೈಪಿಡಿಗಳು, ಮಾರ್ಗದರ್ಶಿ ಸೂತ್ರಗಳು ಮತ್ತು ಯಾವುದೇ ಪದವಿಗಾಗಿ ಸಿದ್ಧಪಡಿಸಿದ ಗ್ರಂಥಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಯನ್ನು ಸೆ. 25ರಿಂದ ಅ. 15ರ ವರೆಗೆ ಕಚೇರಿಯಲ್ಲಿ ಪಡೆಯಬಹುದಾಗಿದ್ದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಲು ಅ. 21 ಕೊನೆಯ ದಿನಾಂಕ.

ಎಂ.ಫಿಲ್‌, ಪಿ.ಎಚ್‌.ಡಿ. ಪ್ರೌಢಪ್ರಬಂಧಗಳು: 2012-13ನೇ ಸಾಲಿನಲ್ಲಿ ಯಾವುದೇ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದ ಬಗ್ಗೆ ಕನ್ನಡದಲ್ಲಿ ಎಂ.ಫಿಲ್‌/ಪಿ.ಎಚ್‌.ಡಿ. ಪದವಿ ಪಡೆದ ಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಧನಸಹಾಯ ನೀಡಲಾಗುವುದು. ಅರ್ಜಿಯನ್ನು ಸೆ. 25ರಿಂದ ಕಚೇರಿಯಿಂದ ಪಡೆಯಬಹುದಾಗಿದ್ದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಲು ಅ. 21 ಕೊನೆಯ ದಿನಾಂಕ.

ವಿಶೇಷ ಘಟಕ ಯೋಜನೆ-ಗಿರಿಜನ ಉಪಯೋಜನೆ: ಪರಿಶಿಷ್ಟ ವರ್ಗ/ಪಂಗಡದ ಕಲಾವಿದರಿಗೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸುಗಮ ಸಂಗೀತ, ನೃತ್ಯ, ಯಕ್ಷಗಾನ, ನಾಟಕ, ವಾದ್ಯಸಂಗೀತ, ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಿದೆ. ಕಾರ್ಯಕ್ರಮ ನೀಡಲಿಚ್ಛಿಸುವವರು ಆಕಾಶವಾಣಿ, ದೂರದರ್ಶನ ಕಲಾವಿದರಾಗಿರಬೇಕು ಅಥವಾ ಪ್ರೌಢದರ್ಜೆ (ಸೀನಿಯರ್‌ ಗ್ರೇಡ್‌) ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತಮ್ಮ ಕಲಾಸೇವಾ ದಾಖಲೆಗಳೊಂದಿಗೆ ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಬರೆದು ತಮ್ಮ ಕಲಾಸೇವಾ ದಾಖಲೆಗಳನ್ನು ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಅ. 26ರ ಒಳಗಾಗಿ ಅರ್ಜಿಗಳನ್ನು ಕಳುಹಿಸಬೇಕು.

ಹೆಚ್ಚಿನ ವಿವರಕ್ಕೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ| ಕೆ. ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿ ನಗರ, ಅಲೆವೂರು ಗ್ರಾಮ, ಉಡುಪಿ ತಾಲೂಕು (0820-2575552)/ ಜನತಾ ಬಜಾರ್‌, ಹಂಪನಕಟ್ಟೆ, ಮಂಗಳೂರು (0824-2441527) ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com