ಅ. 25, 26: ಭಾರತ-ಪೂರ್ವ ಆಫ್ರಿಕಾ ಸಂವಾದ ಕಾರ್ಯಾಗಾರ

ಉಡುಪಿ: ಮಣಿಪಾಲ ವಿವಿಯ ಜಿಯೋಪಾಲಿಟಿಕ್ಸ್‌ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದ ಆಶ್ರಯದಲ್ಲಿ ಐಸಿಡಬ್ಲೂéಎ ಇದರ ಸಹಭಾಗಿತ್ವದಡಿ 'ಅವಕಾಶಗಳ ಶೋಧನೆಗೆ ಸಹಕಾರ: ಭಾರತ-ಪೂರ್ವ ಆಫ್ರಿಕಾ ಜೊತೆ ಸಂವಾದ' ಎನ್ನುವ ಅಂತಾರಾಷ್ಟ್ರೀಯ ಕಾರ್ಯಾಗಾರ ಅ. 25, 26ರಂದು ಮಣಿಪಾಲ ವಿವಿ ಕೌನ್ಸೆಲಿಂಗ್‌ ಹಾಲ್‌ನಲ್ಲಿ ನಡೆಯಲಿದೆ 

ಸವಾಲು ಮತ್ತು ಸ್ಪರ್ಧೆ, ಸಂಪನ್ಮೂಲಗಳ ಬಳಕೆ, ಸಂಶೋಧನೆಗಳ ವಿನಿಮಯ, ವಿದೇಶಿ ನಿಯಮ ಮತ್ತು ವ್ಯವಹಾರ ನಿರ್ವಹಣೆ, ವಿವಿಧ ಸ್ಥರಗಳಲ್ಲಿ ಆರ್ಥಿಕ ಸಂಬಂಧಗಳು ಮತ್ತಿತರ ವಿಚಾರಗಳ ಬಗ್ಗೆ ಕಾರ್ಯಾಗಾರದಲ್ಲಿ ಸಂವಾದ ನಡೆಯಲಿದೆ. ಉಭಯ ದೇಶಗಳ ತಜ್ಞರು ಸಂವಾದ ನಡೆಸಲಿದ್ದಾರೆ. ತಾಂಜೇನಿಯಾ, ಕೀನ್ಯಾ, ಉಗಾಂಡ ಮೊದಲಾದೆಡೆಗಳ 14 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅ. 25ರ ಬೆಳಗ್ಗೆ 10ಕ್ಕೆ ಹೊಸದಿಲ್ಲಿಯ ಸೆಂಟರ್‌ ಫಾರ್‌ ಆಫ್ರಿಕನ್‌ ಸ್ಟಡೀಸ್‌ನ ಪ್ರೊ| ಅಜಯ್‌ ದುಬೆ ಅವರು ಸೆಮಿನಾರನ್ನು ಉದ್ಘಾಟಿಸಲಿದ್ದಾರೆ  ಎಂದು ಪ್ರಕಟಣೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com