ಉಪ್ಪುಂದ: ಸಾಂಸ್ಕೃತಿಕ ರಸಪ್ರಶ್ನೆ ಕಾರ್ಯಕ್ರಮ

ಹೆಮ್ಮಾಡಿ:  ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಅಂಗವಾಗಿ ಯಳಜಿತ್ ಗ್ರಾಮದ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರ ಮತ್ತು ಉಪ್ಪುಂದದ ಶ್ರೀಗುರು ವಿವೇಕ ಯೋಗ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಂಸ್ಕøತಿಕ ರಸಪ್ರಶ್ನೆ ಕಾರ್ಯಕ್ರಮ ಇಲ್ಲಿನ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಅಕ್ಟೋಬರ್ 2ರಂದು ಜರಗಿತು.
     ವಿವೇಕ ಯೋಗ ಸಂಘದ ಅಧ್ಯಕ್ಷ ಮಂಜುನಾಥ ಎಸ್. ಬಿಜೂರು ಅವರು ಅಧ್ಯಕ್ಷತೆ ವಹಿಸಿದ್ದರು. ಸಿದ್ಧಿವಿನಾಯಕ ಸಾಂಸ್ಕøತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಸಾಂಸ್ಕøತಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಪ್ರಶ್ನೆಗಳಿಗೆ ಸರಿಯುತ್ತರಗಳನ್ನು ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. 
    ಯೋಗ ಸಂಘದ ಸದಸ್ಯರಾದ ವೆಂಕಟೇಶ, ನಾರಾಯಣ ದೇವಾಡಿಗ, ಅಚ್ಯುತ ಬಿಲ್ಲವ, ಭಾರತಿ ಉಪಸ್ಥಿತರಿದ್ದರು. ಗಿರೀಶ್ ಶ್ಯಾನುಭಾಗ್ ಅವರು ಸ್ವಾಗತಿಸಿದರು. ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com