ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕುಂದಾಪುರ: ರಾಮಾಯಾಣವನ್ನು ಬರೆದ ವಾಲ್ಮೀಕಿ ಮಹರ್ಷಿಗಳು ಜೀವನದಲ್ಲಿ ಅಳವಡಿಸಿಕೊಂಡ ತತ್ವ -ಸಿದ್ದಾಂತಗಳು ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿದೆ. ಜಾತಿ ಮುಖ್ಯವಲ್ಲ ಶಿಕ್ಷಣ ಮುಖ್ಯವಲ್ಲ ಎಂದು ಗುರುತಿಸಿಕೊಟ್ಟ ವಾಲ್ಮೀಕಿ ಮಹರ್ಷಿಗಳು ಜೀವನದಲ್ಲಿ ಪರಿವರ್ತನೆಯಿಂದ ಯಶಸ್ಸು ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
      ಅವರು ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್‌ , ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತಾ.ಪಂ.ಅಧ್ಯಕ್ಷೆ ದೀಪಿಕಾ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
     ವಾಲ್ಮೀಕಿ ಆವರ ಬಗ್ಗೆ ಉಪನ್ಯಾಸ ಮಾಡಿದ ಉಪನ್ಯಾಸಕ ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಅವರು ಮಾತನಾಡಿ, ತ್ರೇತ್ರಾಯುಗದ ಮಹಾತ್ಮನೋರ್ವನನ್ನು ಕಲಿಯುಗದಲ್ಲಿ ಸ್ಮರಣೆ ಮಾಡುತ್ತಿರುವುದು ಒಂದು ವೈಶಿಷ್ಟಪೂರ್ಣ ಪರಂಪರೆಯಾಗಿದೆ. ಜಗತ್ತಿಗೆ ಮೊತ್ತಮೊದಲಿಗೆ ಶ್ಲೋಕವನ್ನು ಕೊಟ್ಟ ವರಿದ್ದರೆ ಅದು ವಾಲ್ಮೀಕಿ ಮುನಿಯಿಂದ ಮಾತ್ರ. ಹಾಗೆಯೇ ಪ್ರಥಮ ಸಂಗೀತವೂ ಈ ಶ್ಲೋಕದಿಂದ ಬಂದಿದೆ. ಶೋಕ ಯಾವಾಗ ಬರುತ್ತದೋ ಅಲ್ಲಿ ಶ್ಲೋಕ ಬರುತ್ತದೆ ಎನ್ನುವುದನ್ನು ಅವರ ಜೀವನ ವೃತ್ತಾಂತದಿಂದ ತಿಳಿಸುಕೊಳ್ಳಬಹುದಾಗಿದೆ. ಜೀವನದಲ್ಲಿ ಪ್ರತಿಯೊಬ್ಬ ಶಿಕ್ಷಣವನ್ನು ಹೊಂದಿ ಪರಿಪೂರ್ಣನಾಗಿ ಹೊರಬಂದಾಗ ಆತನಿಗೆ ಈ ಜಗತ್ತಿನ ಪರಿಚಯವಾಗುತ್ತದೆ. ಯಾವಾಗ ನಾವು ಪರಿಪೂರ್ಣರಾಗುತ್ತೇವೋ ಅದರಿಂದ ಸಮಾಜದಲ್ಲಿ ಮನ್ನಣೆ ಸಿಗುತ್ತದೆ ಎನ್ನುವುದು ಪ್ರಸ್ತುತ ಎಂದರು.
       ಮುಖ್ಯ ಅತಿಥಿಗಳಾಗಿ ಪುರಸಭೆಯ ಅಧ್ಯಕ್ಷೆ ಕಲಾವತಿ ಯು.ಎಸ್‌., ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೀಯಾನ್‌, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸೀತಾರಾಮ ಶೆಟ್ಟಿ, ಪುರಸಭೆಯ ಸದಸ್ಯರು, ತಾ.ಪಂ.ಸದಸ್ಯರು ಭಾಗವಹಿಸಿದ್ದರು.
      ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ನಾಯಕ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಿಂಹ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com