ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕೋಟ: ಅವಕಾಶ ಸಿಕ್ಕಾಗ ನುಣುಚಿಕೊಳ್ಳದೆ, ಸರಿಯಾಗಿ ಬಳಸಿಕೊಳ್ಳಬೇಕು. ಉತ್ತಮ ಕೇಳುಗರಾಗಿ ಉತ್ತಮ ವಿಚಾರಗಳಲ್ಲಿ ಒಂದನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಅಂಬಲಪಾಡಿ ಧರ್ಮದರ್ಶಿ ಡಾ.ನಿ.ವಿಜಯ ಬಲ್ಲಾಳ್ ಹೇಳಿದರು. 

ಅವರು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾ.ಪಂ. ಸಾರಥ್ಯದಲ್ಲಿ ಕನ್ನಡ- ಸಂಸ್ಕೃತಿ ಇಲಾಖೆ ಉಡುಪಿ, ಡಾ.ಶಿವರಾಮ ಕಾರಂತ ಟ್ರಸ್ಟ್ ಕೋಟ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನದಿನೋತ್ಸವದ ಅಂಗವಾಗಿ ನಡೆದ ಸಾಹಿತ್ಯಿಕ, ಸಾಂಸ್ಕೃತಿಕ ಜಾತ್ರೆ 'ವೌನ'ದಲ್ಲಿ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್, ಜೇಸಿಐ ಕಲ್ಯಾಣಪುರ ಸಾದರ ಪಡಿಸಿದ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ಸುವತಾ ಅಡಿಗ ಮಾತನಾಡಿ, ಮಾತಭಾಷೆ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡುವುದರಿಂದ ಪ್ರಗತಿ ಹೊಂದಲು ಸಾಧ್ಯವಿದೆ ಎಂದರು. ಗೋಷ್ಠಿ 1ರಲ್ಲಿ ಸ್ಪಂದನ ಚಾನೆಲ್ ನಿರೂಪಕ ಅವಿನಾಶ್ ಕಾಮತ್ ಅವರು ಚಲನಚಿತ್ರ ಗೀತೆಯಲ್ಲಿ ಸಾಹಿತ್ಯ ವಿಚಾರವಾಗಿ ಮಾತನಾಡಿದರು.ಯಶೋದಾ ಹೊಳ್ಳ, ಜೇಸಿರೆಟ್ ಜಯಶ್ರೀ, ವಿಘ್ನೇಶ್ ಅಡಿಗ ಪ್ರತಿಸ್ಪಂದನೆ ನೀಡಿದರು. ಗೋಷ್ಠಿ 2ರಲ್ಲಿ ವಿದ್ಯಾರ್ಥಿಗಳಿಂದ ಕವಿತೆ, ಪ್ರಬಂಧ, ಕಥೆ ಬಹುವಿಧ ಗೋಷ್ಠಿ ನಡೆಯಿತು. ಬ್ರಹ್ಮಾವರ ಎಸ್‌ಎಂಎಸ್ ಪ್ರೌಢಶಾಲೆ ವಿದ್ಯಾರ್ಥಿ ಅನಿಲ್ ಕುಮಾರ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್, ಜೇಸಿಐ ನಾಗರಾಜ ಸಂತೆಕಟ್ಟೆ ಪ್ರತಿಸ್ಪಂದನೆ ನೀಡಿದರು. ಗೋಷ್ಠಿ 3ರಲ್ಲಿ ಲಲಿತಾ ಎಸ್. ತುಂಗ, ರತ್ನಾ ಜೆ.ರಾಜ್ ನೇತೃತ್ವದಲ್ಲಿ ಸಂಪ್ರದಾಯ ಗೀತೆಗಳ ಪಾಠ ನಡೆಯಿತು. 

ಬಳಿಕ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೆವಿಧ್ಯ ನಡೆಯಿತು. ಮಕ್ಕಳ ಗೋಷ್ಠಿ ಕಾರ್ಯಕ್ರಮವನ್ನು ವಿದ್ಯಾ ಹೇರ್ಳೆ ನಿರ್ದೇಶಿಸಿದರು. ವೆಂಕಟೇಶ್ ಭಟ್ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com