ಆಕಾಶವಾಣಿ ಸಂಗೀತ ಸಮ್ಮೇಳನ-2013

ಮಂಗಳೂರು: ಆಕಾಶವಾಣಿ ಸಂಗೀತ ಸಮ್ಮೇಳನದ ಅಂಗವಾಗಿ ಮಂಗಳೂರಿನ ಪುರಭವನದಲ್ಲಿ  ಎರಡು ಶಾಸ್ತ್ರೀಯ ಸಂಗೀತ ಕಛೇರಿಗಳು ಜರುಗಿದವು.  ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ವಿದುಷಿ ಕೊಲ್ಕತ್ತಾ ಪದ್ಮಾವತಿ ಸಾರನಾಥನ್ ಕಛೇರಿ ನಡೆಸಿಕೊಟ್ಟರು.  ಪಕ್ಕವಾದ್ಯದಲ್ಲಿ ವಯೊಲಿನ್‍ನಲ್ಲಿ ತಿರುವನಂತಪುರದ ಎಸ್. ಈಶ್ವರ ವರ್ಮಾ, ಮೃದಂಗದಲ್ಲಿ ಕೊಲ್ಕತ್ತಾ ಎಸ್. ಅರವಿಂದ್ ಹಾಗೂ ಘಟಂನಲ್ಲಿ ಎನ್. ಎಚ್.ಬಿ. ರಾಜರಾಜನ್ ತಿರುವನಂತಪುರ ಅವರು ಸಹಕರಿಸಿದರು.
ವಿದುಷಿ ಕೊಲ್ಕತ್ತಾ ಪದ್ಮಾವತಿ ಸಾರನಾಥನ್ ಇವರು ತ್ರೀಚಿಯ “ಎ” ಗ್ರೇಡ ಕಲಾವಿದರಾಗಿದ್ದಾರೆ.  ಭಾರತ ಸರಕಾರದ ಸಿ.ಸಿ.ಅರ್.ಟಿ. ಸ್ಕಾಲರ್‍ಶಿಪ್ ಪಡೆದು ತನ್ನ ಹದಿನೇಳನೇ ವಯಸ್ಸಿನಲ್ಲಿ ಆಕಾಶವಾಣಿಯ ಅಂಗೀಕೃತ ಕಲಾವಿದೆಯಾಗಿ ಆಯ್ಕೆಯಾಗಿದ್ದರು.  ವೃತ್ತಿಯಲ್ಲಿ ಚಾರ್ಟ್‍ರ್ಡ್ ಅಕೌಂಟೆಂಟ್ (ಲೆಕ್ಕ ಪರಿಶೋಧಕರಾಗಿರುವ) ಆಗಿರುವ ಇವರು ಭರತ ನಾಟ್ಯ ಕಲಾವಿದೆಯಾಗಿ, ವಯೋಲಿನ್ ವಾದಕರಾಗಿ ಗುರುತಿಸಲ್ಪಟ್ಟಿದ್ದಾರೆ
ಎರಡನೇ ಕಛೇರಿ ಹಿಂದೂಸ್ತಾನಿ ವಯೋಲಿನ್ ಕಾರ್ಯಕ್ರಮವನ್ನು ಮುಂಬಯಿಯ ವಿದುಷಿ ಕಲಾ ರಾಮನಾಥ ನಡೆಸಿಕೊಟ್ಟರು.  ತಬ್ಲಾ ಸಾಥಿಯನ್ನು ಬೆಂಗಳೂರಿನ ವಿಶ್ವನಾಥ ನಾಕೋಡ ನೀಡಿದರು.  
ಭಾರತೀಯ ಶಾಸ್ತೀಯ ಸಂಗೀತದ ಹಾಡುವ ವಯೋಲಿನ – the singing violin of Indian classical music ಎನ್ನುವ ಖ್ಯಾತಿ ಗಳಿಸಿರುವ ಇವರು  ಜಗತ್ತಿನ ಅತ್ಯುತ್ತಮ ತಂತಿವಾದ್ಯಕಾರರ ಸಾಲಿನಲ್ಲಿ ವಿರಾಜಿಸುತ್ತಿರುªವರು-ವಿದುಷಿ ಕಲಾ ರಾಮನಾಥ, ಮುಂಬಯಿ.  ಸಾಂಪ್ರಾದಾಯಿಕ ವಯೋಲಿನ ವಾದನ ಪಾದಮ್ಯದೊಂದಿಗೆ ವಿಶ್ವದ ಹಳೆಯ ಹಾಗೂ ಹೊಸ ತಲೆಮಾರಿನ ಕಲಾವಿದರೊಡನೆ ಸಂಗೀತ ಸಾಂಗತ್ಯ ಸಮೀಕರಿಸಿಕೊಂಡು, ಪಾಶ್ಚಾತ್ಯ ಸಂಗೀತ, ಜಾಝ,  ಫಾಮೆಂಕೋ, ಆಫ್ರಿಕನ್ ಸಂಗೀತ ಇತ್ಯಾದಿಗಳೊಂದಿಗೆ ಸುಲಲಿತವಾಗಿ ಬೆರೆತು ತನ್ನ ವೈಶಿಷ್ಟವನ್ನು ಉನ್ನತ ಮಟ್ಟದಲ್ಲಿ ತೋರ್ಪಡಿಸಿದ್ದಾರೆ.  
ಎರಡೂ ಕಾರ್ಯಕ್ರಮಗಳಿಗೆ ಶ್ರುತಿ ನೀಡಿದವರು ಮಂಗಳೂರು ಆಕಾಶವಾಣಿಯ ನಿಲಯದ ಕಲಾವಿದರಾದ ಮೌನೇಶಕುಮಾರ ಛಾವಣಿ.   
ಕಾರ್ಯಕ್ರಮದ ಆರಂಭದಲ್ಲಿ ನಿಲಯದ ಕಾರ್ಯಕ್ರಮ ಮುಖ್ಯಸ್ಥ ಮತ್ತು ಸಹಾಯಕ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಮುದ್ದು ಮೂಡುಬೆಳ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.  ಭಾರೀ ಪ್ರೇಕ್ಷಕವೃಂದ ಕಾರ್ಯಕ್ರಮಕ್ಕೆ ಕಳೆ ನೀಡಿತು.  

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com