ವಿವೇಕಾನಂದ ಜಯಂತಿ ವಿಶೇಷ ಉಪನ್ಯಾಸ

ಅತ್ಯಾಡಿ:    ಸ್ವಾಮಿ ವಿವೇಕಾನಂದರ 150ನೇ ಜನ್ಮಜಯಂತಿ ವರ್ಷಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವೇಕಾನಂದರ ಕುರಿತ ವಿಶೇಷ ಉಪನ್ಯಾಸ ಮತ್ತು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಯಳಜಿತ್ ಗ್ರಾಮದ ಸಿದ್ಧಿವಿನಾಯಕ ಸಾಂಸ್ಕ್ರತಿಕ ಕೇಂದ್ರದ ಆಶ್ರಯದಲ್ಲಿ ಅತ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಜರಗಿತು.
    ಶಾಲಾ ಮುಖ್ಯಶಿಕ್ಷಕ ಪ್ರಭಾಕರ ಬಿಲ್ಲವ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಮೌಲಿಕ ಪರಿಣಾಮವನ್ನು ತರಬಲ್ಲ ಶಕಿಯನ್ನು ಹೊಂದಿರುವ ಸ್ವಾಮಿ ವಿವೇಕಾನಂದರ ದಿವ್ಯ ಸಂದೇಶಗಳ ಬಗ್ಗೆ ಉತ್ತಮ ಜಾಗೃತಿಯ ಆವಶ್ಯಕತೆ ಇದೆ ಎಂದರು. ಮುಖ್ಯ ಅತಿಥಿ ಸಿದ್ಧಿವಿನಾಯಕ ಸಾಂಸ್ಕøತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಅವರು ವಿಶೇಷ ಉಪನ್ಯಾಸ ನೀಡಿದರು. ಸಹಶಿಕ್ಷಕ ಮಂಜುನಾಥ ಬಿಲ್ಲವ ಉಪಸ್ಥಿತರಿದ್ದರು.
    ಸಹಶಿಕ್ಷಕ ಮಂಜುನಾಥ ನಾಯ್ಕ ಅವರು ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಥೋಮಸ್ ಕುಟ್ಟಿ ಅವರು ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com