ಮಂಗಳೂರು- ಹುಬ್ಬಳ್ಳಿ ರೈಲು ಸಂಚಾರ ಶೀಘ್ರ ಆರಂಭ

ಮಂಗಳೂರು: ಬಹುಬೇಡಿಕೆಯ ಮಂಗಳೂರು- ಹುಬ್ಬಳ್ಳಿ ರೈಲು ಸಂಚಾರ ಶೀಘ್ರ ಆರಂಭಗೊಳ್ಳಲಿದೆ. ಪ್ರಾಯೋಗಿಕ ನೆಲೆಯಲ್ಲಿ ವಿಶೇಷ ರೈಲು ಸೆ. 29ರಂದು ಸಂಚರಿಸಿದೆ. ಡಿಸೆಂಬರ್‌ ವೇಳೆಗೆ ಪೂರ್ಣ ಪ್ರಮಾಣದ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.  ನೈಋತ್ಯ ರೈಲ್ವೇ ವಲಯದ ವತಿಯಿಂದ ಆರಂಭಗೊಳ್ಳಲಿರುವ ನೂತನ ರೈಲು ಸಂಚಾರ ಮಂಗಳೂರು ಸೆಂಟ್ರಲ್‌ನಿಂದ ಹೊರಡಲಿದೆ. ಪುತ್ತೂರು, ಸುಬ್ರಹ್ಮಣ್ಯ, ಸಕಲೇಶಪುರ, ಹಾಸನ, ಅರಸಿಕೆರೆ, ಕಡೂರು, ಬಿರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಕುಂದಗೋಳ ನಿಲ್ದಾಣಗಳ ಮೂಲಕ ಸಂಚರಿಸಿ ಹುಬ್ಬಳ್ಳಿ ತಲುಪಲಿದೆ.  ರೈಲು ಸಂಚಾರ ಆರಂಭದ ಬಗ್ಗೆ ದಿನ ನಿಗದಿ ಹಾಗೂ ಸಂಚಾರ ವೇಳಾಪಟ್ಟಿಯ ಬಗ್ಗೆ ಇನ್ನಷ್ಟೆ ನಿರ್ಧಾರವಾಗಬೇಕಾಗಿದೆ. ದಿನಂಪ್ರತಿ ಅಥವಾ ನಿಗದಿತ ದಿನಗಳಲ್ಲಿ ಸಂಚಾರ ನಡೆಸುವುದೇ ಎಂಬ ಬಗ್ಗೆ ಶೀಘ್ರ ನಿರ್ಧಾರವಾಗಲಿದೆ. ಬೆಳಗ್ಗೆ ಹೊರಟು ಸಂಜೆ ತಲುಪುವ ರೀತಿಯಲ್ಲಿ ವೇಳಾಪಟ್ಟಿಯನ್ನು ಹೊಂದಾಣಿಕೆ ಮಾಡಬೇಕು ಎಂಬ ಬಗ್ಗೆಯೂ ಬೇಡಿಕೆಗಳಿವೆ. ಸೆ. 29ರಂದು ನಡೆಸಿದ ವಿಶೇಷ ರೈಲು ಸಂಚಾರದ ವೇಳೆ ವೇಳಾಪಟ್ಟಿಯ ಬಗ್ಗೆಯೂ ಪರಿಶೀಲನೆ ನಡೆದಿದೆ.  ಮಂಗಳೂರು- ಹುಬ್ಬಳ್ಳಿ ಮಧ್ಯೆ ರೈಲು ಸಂಚಾರ ಆರಂಭಿಸಬೇಕೆಂದು ಕುಕ್ಕೆಶ್ರೀ ಸುಬ್ರಹ್ಮಣ್ಯ- ಮಂಗಳೂರು ರೈಲು ಬಳಕೆದಾರರ ವೇದಿಕೆ ಮಂಗಳೂರು ಸಂಸದರ ಶಿಫಾರಸ್ಸಿನೊಂದಿಗೆ ನಿರಂತರವಾಗಿ ಆಗ್ರಹಿಸುತ್ತಲೇ ಬಂದಿತ್ತು ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಲಹಾ ಸಮಿತಿ ಸದಸ್ಯ ಸುದರ್ಶನ್‌ ಪುತ್ತೂರು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com