ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕೊರಗರ ಪ್ರತಿಭಟನೆ

ಕುಂದಾಪುರ: ತಾಲೂಕಿನಲ್ಲಿ ನೆಲೆಸಿರುವ ಕೊರಗರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಕೊರಗ ಅಭಿವದ್ಧಿ ಸಂಘಗಳ ಒಕ್ಕೂಟ ಹಾಗೂ ಕೊರಗರ ತಾಲೂಕು ಸಮಿತಿ ನೇತತ್ವದಲ್ಲಿ ಬೆಳಗ್ಗೆ ಕುಂದಾಪುರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು. 
    ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡಾ ಪ್ರತಿಭಟನೆಯಲ್ಲಿ ಮಾತನಾಡಿ, ಜಿಲ್ಲೆಯ ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ನಡೆದಿದ್ದು ಕುಂದಾಪುರ ತಾಲೂಕಿನಲ್ಲಿ ಹಕ್ಕುಪತ್ರ ವಿತರಣೆ ವಿಳಂಬ ಆಗುತ್ತಿದೆ. 2003ರಲ್ಲಿ 202 ಅರ್ಜಿಗಳನ್ನು ಸಲ್ಲಿಸಲಾಗಿದ್ದು ಅದರಲ್ಲಿ ಕೇವಲ 31 ಕುಟುಂಬಗಳಿಗೆ ಮಾತ್ರ ಭೂಮಿಯ ಹಕ್ಕು ಪತ್ರ ಲಭಿಸಿದೆ. 
     ಕುಂದಾಪುರ ಮತ್ತು ವಂಡ್ಸೆ ಹೋಬಳಿಯಲ್ಲಿ ಹಕ್ಕು ಪತ್ರ ವಂಚಿತ ಕೊರಗ ಬಾಂಧವರು ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೊರಗರಿಗೆ 5 ಎಕರೆ ಭೂಮಿ ಕೊಡಬೇಕು ಎಂಬ ಸರಕಾರಿ ಕಾನೂನು ಇದ್ದರೂ ಅದನ್ನು ನೀಡುವ ಕೆಲಸ ಆಗಿಲ್ಲ. ಆದರೆ ನೆಲೆಸಿರುವ ಭೂಮಿಗೂ ಹಕ್ಕುಪತ್ರ ನೀಡದೆ ಕಂದಾಯ ಇಲಾಖೆ ಕೊರಗರ ಮೇಲೆ ದೌರ್ಜನ್ಯ ಎಸಗಿದೆ ಎಂದು ಅವರು ಆರೋಪಿಸಿದರು. 
    ಒಕ್ಕೂಟದ ಉಪಾಧ್ಯಕ್ಷೆ ಗಿರಿಜಾ ಜನ್ನಾಡಿ, ಕಾರ್ಯದರ್ಶಿ ಯಳಜಿತ ಸುರೇಶ್ ಹಾಗೂ ಹಕ್ಕು ಪತ್ರ ವಂಚಿತ ಕೊರಗ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಮನವಿ ಸ್ವೀಕಾರ: ಪ್ರತಿಭಟನೆ ನಿರತ ಕೊರಗ ಬಾಂಧವರನ್ನು ಭೇಟಿ ಮಾಡಿದ ತಹಸೀಲ್ದಾರರಾದ ಗಾಯತ್ರಿ ಎನ್. ನಾಯಕ್ ಮನವಿ ಸ್ವೀಕರಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com