ವಾಲಿಕೆರೆ ಕಲ್ಲು ಕೋರೆಯಲ್ಲಿ ಮತ್ತೆ ಪ್ರಕ್ಷುಬ್ದ ವಾತವರಣ

ಕೊಲ್ಲೂರು: ವಂಡ್ಸೆ ಸಮೀಪದ ವಾಲಿಕೆರೆ ಎಂಬಲ್ಲಿ ಕಲ್ಲು ಕೋರೆಯ ನ್ಪೋಟದ ವಿಚಾರದಲ್ಲಿ ಮಾಲೀಕರು ಹಾಗೂ ಸ್ಥಳೀಯರ ನಡುವೆ ಉಂಟಾಗಿರುವ ಸಮಸ್ಯೆ ಬಿಗಾಡಾಯಿಸಿದ್ದು, ಇಂದು ನ್ಪೋಟಗೊಳಿಸಲು ತೆರಳುತ್ತಿದ್ದ ಗುಂಪು ಒಂದರ ವಿರುದ್ದ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನೆಡೆಸಲು ಸಜ್ಜಾಗಿರುವ ಘಟನೆ ನೆಡೆದಿದೆ.

ಬಹಳಷ್ಟು ಸಮಯದಿಂದ ವಾಲಿಕೆರೆ ಎಂಬಲ್ಲಿ ಕಲ್ಲು ಕೋರೆ ನ್ಪೋಟಗೊಳಿಸುವುದರಿಂದ ಅಲ್ಲಿನ ನಿವಾಸಿಗಳ ಮೆನೆ ಹಾನಿ ಆಗುತ್ತಿರುವುದರ ಬಗ್ಗೆ ವಂಡ್ಸೆ ಗ್ರಾಮಪಂಚಾಯತ ನಲ್ಲಿ ಚರ್ಚೆ ನೆಡೆದಿದ್ದು ಕೊಲ್ಲೂರು ಪೋಲಿಸರಿಗೆ ದೂರು ನೀಡಲಾಗಿದೆ. ಈ ದಿಸೆಯಲ್ಲಿ ಕುಂದಾಪುರ ತಹಶೀಲ್ದಾರು ಇತ್ತೀಚೆಗೆ ಇಲಾಖೆ ಅಧಿಕಾರಿಗಳೊಡನೆ ಸ್ಥಳಕ್ಕೆ ಬೇಟಿ ಇತ್ತು ಸಮಸ್ಯೆ ಬಗೆ ಹರಿಸುವುದಾಗಿ ಆಶ್ವಾಸನೆ ನೀಡಿದ್ದರು.

ಕಲ್ಲು ಕೋರೆ ಮಾಲಿಕರು ಕಾನೂನಿನ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು ಅ ಬಗ್ಗೆ ಇಲಾಖೆ ಅನುಮತಿ ಇದೇ ಎಂದು ವಾದಿಸಿದರೆ. ಸ್ಥಳೀಯರು ಈಗಾಗಲೇ ತಮ್ಮ ಮನೆ ಬಿರುಕು ಬಿಟ್ಟಿದ್ದು ತಮಗೆ ನ್ಯಾಯ ಬೇಕೇಂದು ಪಟ್ಟು ಹಿಡಿದಿದ್ದಾರೆ.

ಸ್ಥಳೀಯರು ಹಾಗೂ ಕಲ್ಲು ಕೋರೆ ಮಾಲಿಕರ ನಡಿವಿನ ಈ ಸಂಘರ್ಷ ಮಾತ್ರ ಅಕ್ಟೋಬರ 1 ರಂದು ಸಂಜೆ ಪ್ರಕ್ಷುಬ್ದ ವಾತವರಣ ರ್ನಿಮಿಸಿದ್ದು ಸ್ಥಳಕ್ಕೆ ಪೋಲಿಸರು ಆಗಮಿಸಿದ್ದಾರೆ.
Udayavani | Oct 01, 2013
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com