ವಿಜ್ಞಾನ -ತಂತ್ರಜ್ಞಾನ ಸಮ್ಮೇಳನ:ನೋಂದಣಿ

ಉಡುಪಿ: ಕರ್ನಾಟಕ ವಿಜ್ಞಾನ  ಮತ್ತು ತಂತ್ರಜ್ಞಾನ ಅಕಾಡೆಮಿಯ ಆರನೇ ವಾರ್ಷಿಕ ಸಮ್ಮೇಳನವನ್ನು ಬೆಂಗಳೂರಿನ ಕ್ರೆ„ಸ್ಟ್‌ ವಿ.ವಿ. ಸಹಯೋಗದೊಂದಿಗೆ ಡಿ. 20 ಮತ್ತು 21 ರಂದು 'ಅವಿಷ್ಕಾರಕ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜನಕ್ಕೆ ವಿಜ್ಞಾನ  ಮತ್ತು ತಂತ್ರಜ್ಞಾನ' ಎಂಬ ಕೇಂದ್ರ ವಿಷಯದಡಿ ಆಯೋಜಿಸಲಾಗುವುದು.

ಸಮ್ಮೇಳನದ ಪ್ರತಿನಿಧಿಗಳಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ನಾತಕೋತ್ತರ/ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ವಿಜ್ಞಾ ನಾಸಕ್ತರು ಭಾಗವಹಿಸಬಹುದಾಗಿದೆ. ಮೂಲ ಮತ್ತು ಅನ್ವಯಿಕ ವಿಜ್ಞಾನ  ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಾತ್ಯಕ್ಷಿಕೆಗಳನ್ನು ಮಂಡಿಸಬಹುದಾಗಿದೆ. ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಹಾಗೂ ಪ್ರಾತ್ಯಕ್ಷಿಕೆ ಕಳುಹಿಸಲು ನ.30 ಕಡೆಯ ದಿನ. ತಜ್ಞ ಸಮಿತಿಯು ಆಯ್ಕೆ ಮಾಡಿದ ಅತ್ಯುತ್ತಮವಾದ 3 ಪ್ರಾತ್ಯಕ್ಷಿಕೆಗಳಿಗೆ ಬಹುಮಾನಗಳನ್ನು ನೀಡಲಾಗುವುದು. ವಿವರವನ್ನು ಕ್ರೆ„ಸ್ಟ್‌ ವಿ.ವಿ. ವೆಬ್‌ತಾಣದಿಂದ (www.chrisrtuniversity.in ) ಪಡೆಯಬಹುದಾಗಿದೆ. ಸಮ್ಮೇಳನಕ್ಕೆ ಪ್ರವೇಶ ಉಚಿತ, ಮೊದಲು ನೋಂದಾಯಿಸಿಕೊಂಡವರಿಗೆ ಆದ್ಯತೆಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com