ನ. 30: ಬೈಂದೂರು ಹೋಲಿಕ್ರಾಸ್ ಚರ್ಚಿಗೆ ಉಡುಪಿ ಬಿಷಪ್ ಭೇಟಿ

ಬೈಂದೂರು: ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಅತೀ ವಂದನೀಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ರವರು ನವೆಂಬರ್ 30ರಿಂದ ಡಿಸೆಂಬರ್ 2ರ ತನಕ ಬೈಂದೂರಿನ ಹೋಲಿಕ್ರಾಸ್  ಚರ್ಚಿಗೆ ಅಧೀಕೃತ ಭೇಟಿ ನೀಡಲಿದ್ದಾರೆ.
     ಈ ಸಂದರ್ಭದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ದೀಕ್ಷಾ ಕಾರ್ಯಕ್ರಮ, ಸಂಘ - ಸಂಸ್ಥೆಗಳ ಮುಖ್ಯಸ್ಥರ ಪ್ರತಿನಿಧಿಗಳೊಂದಿಗೆ ಮತ್ತು ಶಿಕ್ಷಕರೊಂದಿಗೆ ಸಂವಾದ, ಚರ್ಚೆ ನಡೆಸಿ, ಇಗರ್ಜಿ ಗುಡ್ಡೆಯಲ್ಲಿರುವ ನೂತನ ದೇವಮಂದಿರ ಕಟ್ಟಡದ ಕಾಮಗಾರಿ ವೀಕ್ಷಿಸಿ ನಂತರ ದಿವ್ಯ ಬಲಿಪೂಜೆ ನೆರವೇರಿಸಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com