ಕೃಷಿ ಮತ್ತು ಔದ್ಯೋಗಿಕ ರಂಗದಲ್ಲಿ ಕ್ರಾಂತಿಗೈದ ಸಂಸ್ಥೆ, ಅಗ್ರಿಗೋಲ್ಡ್ : ಯು.ಎಸ್.ಶೆಣೈ

ಕುಂದಾಪುರ ಕುಂದಾಪುರ :ಭಾರತ ದೇಶದಲ್ಲಿ ಅವನತಿ ಹೊಂದುತ್ತಿರುವ ಸಾರ್ವಕಾಲಿಕ ಪರಂಪರಾತ್ಮಕ ಕೃಷಿಯನ್ನು ಆಧಾರವಾಗಿಸಿಕೊಂಡು, ಆಧುನಿಕ ತಂತ್ರಜ್ಞಾನದ ಕೈಗಾರಿಕಾ ವ್ಯವಸ್ಥೆ ಮುಖೇನವಾಗಿ ಅಭೂತಪೂರ್ವವಾಗಿ ಬೆಳೆದು, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಬೀರಿದ್ದು ಮಾತ್ರವಲ್ಲದೇ, ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಜೀವನಾಧಾರಕ ಉದ್ಯೋಗ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಕೃಷಿ ಮತ್ತು ಔದ್ಯೋಗಿಕ ರಂಗದಲ್ಲಿ ಕ್ರಾಂತಿಗೈದ ಸಂಸ್ಥೆ ಅಗ್ರಿಗೋಲ್ಡ್ ಎಂದು ಕುಂದಾಪುರದ ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ತಿಳಿಸಿದರು.
ಅವರು ಅಗ್ರಿಗೋಲ್ಡ್ ಸಂಸ್ಥೆಯ 19ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕುಂದಾಪುರ ಅಗ್ರಿಗೋಲ್ಡ್ ಶಾಖೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಕುಂದಾಪುರ ಸಂಚಾರಿ ಪೋಲೀಸ್ ಠಾಣಾ ಸಬ್‍ಇನ್ಸ್‍ಪೆಕ್ಟರ್ ಇಮ್ರಾನ್ ಅವರು ಮಾತನಾಡಿ, ಕೃಷಿಯೊಂದಿಗೆ ಅನೇಕ ವ್ಯವಹಾರಿಕ ಉದ್ಯಮಗಳನ್ನು ಕೂಡ ಬೆಳೆಸುತ್ತಿರುವ ಅಗ್ರಿಗೋಲ್ಡ್ ಸಂಸ್ಥೆ ಭವಿಷ್ಯದಲ್ಲಿ ಉದ್ಯಮಕ್ರಾಂತಿಗೈದ ಭಾರತ ದೇಶದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ಅಭಿವೃದ್ಧಿ ಹೊದಲಿ ಎಂದು ಶುಭ ಹಾರೈಸಿದರು.
ಅಗ್ರಿಗೋಲ್ಡ್ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಕುಂದಾಪುರದ ಸರಕಾರಿ ಆಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಅಗ್ರಿಗೋಲ್ಡ್ ಕುಂದಾಪುರ ಶಾಖಾ ಪ್ರಬಂಧಕ ಪ್ರಶಾಂತ್ ಪೂಜಾರಿ, ಮಾರುಕಟ್ಟೆಯ ಪ್ರಬಂಧಕ ಎಚ್.ಅನಂತಭಟ್ ಹಾಗೂ ಕೆ.ಶಿವಾನಂದ ಐತಾಳ್ ಉಪಸ್ಥಿತರಿದ್ದರು.
ವಿಘ್ನೇಶ್ವರ ಮೂರ್ತಿ ಮಂಜ ಸ್ವಾಗತಿಸಿ, ಶ್ರೀಮತಿ ಸುಶೀಲಾ ಮಯ್ಯ ವಂದಿಸಿ, ರಾಮಕೃಷ್ಣ ಐತಾಳ್ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com