ಯಕ್ಷಗಾನ ಛಾಯಾಚಿತ್ರ ಸ್ಪರ್ಧೆ

ಮೂಡಬಿದಿರೆ: ಮೂಡಬಿದಿರೆಯಲ್ಲಿ ಜರಗಲಿರುವ ಆಳ್ವಾಸ ವಿಶ್ವ ನುಡಿಸಿರಿ ವಿರಾಸತ್‌ ಅಂಗವಾಗಿ ನಡೆಯುವ ಯಕ್ಷಗಾನ ಛಾಯಾಚಿತ್ರ ಸ್ಪರ್ಧೆಗೆ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಯಕ್ಷಗಾನಕ್ಕೆ ಸಂಬಂಧಿಸಿದ 8 x12ರ ಅಳತೆಯ ವರ್ಣಮಯ ಛಾಯಾಚಿತ್ರ ಕಳುಹಿಸಿ ಕೊಡಬಹುದು. ಛಾಯಚಿತ್ರವನ್ನು ಲ್ಯಾಮಿನೇಶನ್‌ ಮಾಡಿರಬೇಕು ಹಾಗೂ ಛಾಯಾಚಿತ್ರದ ಹಿಂದೆ ಮೊಬೈಲ್‌ ಸಂಖ್ಯೆ ಬರೆದಿರಬೇಕು. ವಿಜೇತರಿಗೆ ಪ್ರಶಸ್ತಿಯೊಂದಿಗೆ ಪ್ರಥಮ ರೂ. 10,000, ದ್ವಿತೀಯ ರೂ. 5000, ತೃತೀಯ ರೂ. 2500 ಹಾಗೂ ಸಮಾಧಾನಕರ ತಲಾ ರೂ. 2000 ದಂತೆ 5 ಜನರಿಗೆ ನೀಡಿ ಗೌರವಿಸಲಾಗುವುದು. ಛಾಯಾಚಿತ್ರ ಕಳುಹಿಸಿಕೊಡಲು ಡಿ. 10 ಅಂತಿಮ ದಿನಾಂಕ.

ಛಾಯಾಚಿತ್ರ ಕಳುಹಿಸಿ ಕೊಡಬೇಕಾದ ವಿಳಾಸ ಯಕ್ಷಗಾನ ಛಾಯಾಚಿತ್ರ ಸ್ಪರ್ಧಾ ವಿಭಾಗ, ವಿಶ್ವನುಡಿಸಿರಿ ಮಿನೇಜಸ್‌ ಕಾಂಪ್ಲೆಕ್ಸ್‌ ಮೂಡುಬಿದಿರೆ - ಮಂಗಳೂರು, ದ.ಕ. ಹೆಚ್ಚಿನ ಮಾಹಿತಿಗೆ 9845644556, 7353006387 ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಬಹುದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com