ಅಮಾಸೆಬೈಲು : ಬಿಲ್ವವೃಕ್ಷ ಆಂದೋಲನ

ಕುಂದಾಪುರ: ಗ್ರೀನ್ ಇಂಡಿಯಾ ಮೂವ್‍ಮೆಂಟ್ (ರಿ) ಆಶ್ರಯದಲ್ಲಿ ನಡೆಯುತ್ತಿರುವ ಬಿಲ್ವವೃಕ್ಷ ಆಂದೋಲನದ ಅಂಗವಾಗಿ ಇತ್ತೀಚೆಗೆ ಕುಂದಾಪುರ ತಾಲೂಕಿನ ಅಮಾಸೆಬೈಲಿನ ಶ್ರೀ ಮಾಂಡವಿ ಶಂಕರನಾರಾಯಣ ದೇವಸ್ಥಾನದಲ್ಲಿ ಬಿಲ್ವ ಸಸಿಗಳನ್ನು ನೆಡಲಾಯಿತು.
ದೇವಳದ ಅರ್ಚಕ ಕೃಷ್ಣ ಭಾಗವತ ಅವರು ಬಿಲ್ವ ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮದ ಚೇರ್ಮನ್ ಕ್ಲಬ್ ಸದಸ್ಯ ಎ.ಶಂಕರ ಐತಾಳ್, ಉದ್ಯಮಿ ದಿವಾನಂದ ಕೊಡ್ಗಿ, ಆಕಾಶ್ ಕೊಡ್ಗಿ, ಬಿಲ್ವವೃಕ್ಷ ಆಂದೋಲನದ ಸಂಚಾಲಕರಾದ ಕೆ.ಮೋಹನ ಆಚಾರ್ಯ, ಸಂತೋಷ ಕೋಣಿ ಉಪಸ್ಥಿತರಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com