ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ


ಬೈಂದೂರು,  ಬೈಂದೂರು ಮತ್ತು ವಂಡ್ಸೆ ಬ್ಲೋಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ಮಂಗಳವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅದ್ಯಕ್ಷತೆ ವಹಿಸಿದ್ದರು. 
   ಇಂದಿರಾ ಗಾಂಧಿ ಅವರಿಗೆ ನುಡಿನಮನ ಸಲ್ಲಿಸಿದ ಪೂಜಾರಿ ಇಂದಿರಾ ಗಾಂಧಿ ಅವರನ್ನು ದೇಶ ಕಂಡ ಶ್ರೇಷ್ಠ ಪ್ರಧಾನಿಗಳಲ್ಲಿ ಒಬ್ಬರೆಂದು ಬಣ್ಣಿಸಿದರು. ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ಧತಿಯಂತಹ ಪ್ರಗತಿಪರ ಹೆಜ್ಜೆಗಳ ಮೂಲಕ, ಭೂಸುಧಾರಣೆ, ಸಾಲಮನ್ನಾ, 20 ಅಂಶಗಳ ಕಾರ್ಯಕ್ರಮಗಳ ಮೂಲಕ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದರು. ಬಡತನ ನಿವಾರಣೆಗೆ ಕ್ರಮ ಕೈಗೊಂಡರು.  ದೇಶದ ಆಡಳಿತ, ವಿದೇಶ ವ್ಯವಹಾರಗಳಲ್ಲಿ ದಿಟ್ಟ ನಿಲುವು ತಳೆದರು. ಬಾಂಗ್ಲಾ ವಿಮೋಚನೆಗೆ ನೆರವಾಗುವ ಮೂಲಕ ಅದರ ಮೇಲೆ ಪಾಕಿಸ್ತಾನ ನಡೆಸುತ್ತಿದ್ದ ದಬ್ಬಾಳಿಕೆಗೆ ಅಂತ್ಯ ಹಾಡಿದರು. ಇಂದಿರಾ ಗಾಂಧಿ ತಮ್ಮ ಸಾಧನೆಗಳ ಮೂಲಕ ಜಾಗತಿಕ ನಾಯಕಿಯಾಗಿ ಮೂಡಿ ಬಂದರು ಎಂದು ಅವರು ಹೇಳಿದರು. 
    ಧುರೀಣರಾದ ಎಸ್. ರಾಜು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇಂದಿರಾ ಅವರ ಕೊಡುಗೆಗಳನ್ನು ಸ್ಮರಿಸಿದರು. ಬೈಂದೂರು ಬ್ಲೋಕ್ ಅಧ್ಯಕ್ಷ ಕೆ. ರಮೇಶ ಗಾಣಿಗ, ವಂಡ್ಸೆ ಬ್ಲೋಕ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಪಕ್ಷದ ವಿವಿಧ ಘಟಕಗಳ ಪ್ರಮುಖರಾದ ಸುಬ್ರಹ್ಮಣ್ಯ ಪೂಜಾರಿ, ಎಸ್. ವಾಸುದೇವ ಯಡಿಯಾಳ, ಪ್ರಸನ್ನಕುಮಾರ ಶೆಟ್ಟಿ, ಎಚ್. ಮಂಜಯ್ಯ ಶೆಟ್ಟಿ, ಎಸ್. ಮದನಕುಮಾರ, ಬಿ. ರಘುರಾಮ ಶೆಟ್ಟಿ, ರಿಯಾಜ್ ಅಹಮದ್, ಸುಬ್ರಾಯ ಶೇರುಗಾರ್, ಎಸ್. ಎಂ. ಸಯ್ಯದ್  ಮತ್ತಿತರರು ಇದ್ದರು. 
   ಇದೇ ಸಂದರ್ಭದಲ್ಲಿ ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಕೆಂಚನೂರು ಸೋಮಶೇಖರ ಶೆಟ್ಟಿ ಮತ್ತು ಎಸ್. ಜನಾರ್ದನ ಮರವಂತೆ ಅವರನ್ನು ಅಭಿನಂದಿಸಲಾಯಿತು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com