“ಈ ಮಿಂಚು” ಮಾಸಿಕ ಪತ್ರಿಕೆ ಬಿಡುಗಡೆ

ಕುಂದಾಪುರ:ತಾಲೂಕಿನ ಕೋಣಿಯ ಕೆ.ಜಿ.ಜಗನ್ನಾಥರಾವ್ ಸರ್ಕಾರಿ ಪ್ರೌಢಶಾಲೆಯ ಮಾಸಿಕ  ಪತ್ರಿಕೆ  “ಈ ಮಿಂಚು”ನ್ನು ರಾಜಾರಾಮ್ ಹೆಬ್ಬಾರ್ ಕೋಣಿ ಅವರು ವಿದ್ಯಾರ್ಥಿಗಳಿಗೆ ವಿತರಿಸುವುದರ ಮೂಲಕ ಉದ್ಘಾಟನೆಗೊಳಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಸಾಹಿತ್ಯದೊಂದಿಗೆ ಇಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಪತ್ರಿಕೆಯ ಉದ್ದೇಶವನ್ನು ಈಡೇರಿಸಲಿ ಎಂಬ ಆಶಯ ವ್ಯಕ್ತಪಡಿಸಿದರು   ಉದ್ಘಾಟನೆಯ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿಯವರು ಮಾತನಾಡಿ ಪತ್ರಿಕೆಯ ನಿರಂತರತೆಯ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳುವುದು ಅವಶ್ಯ ಎಂದರು. “ಈ ಮಿಂಚು” ಪ್ರೌಢಶಾಲೆಗಳಲ್ಲೇ ಪ್ರಥಮ ಮಾಸಿಕ ಪತ್ರಿಕೆಯಾಗಿದೆ.
            ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದ ವಿಕಲಚೇತನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಗುಂಡೆಸೆತ ಮತ್ತು ಜಾವೆಲಿನ್ ಥ್ರೋ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಈ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅರುಣ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆಸಲಾದ ಸ್ಪರ್ದೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಸದಸ್ಯರಾದ ಕೃಷ್ಣದೇವ ಕಾರಂತ,  ಎನ್. ಕೆ. ಹೆಬ್ಬಾರ್, ಸವಿತಾ ಸೋಮಯಾಜಿ, ವಿಖ್ಯಾತ್ ಹತ್ವಾರ್ ಗುರುರಾಜ ನಾಯ್ಕ, ಮಾಲತಿ ಹೊಳ್ಳ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ  ಉದಯ ಗಾಂವಕರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಭಾರತಿ ಎಸ್ ನಾಯಕ್ ಸ್ವಾಗತಿಸಿದರು.     “ಈ ಮಿಂಚು” ಪತ್ರಿಕೆಯ ಸಂಪಾದಕ ಸದಾನಂದ ಬೈಂದೂರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರಾದ ರೇಣುಕಾ, ದೀಪಾ, ಅಪೂರ್ವಶ್ರೀ ಮತ್ತು ಅರ್ಪಿತಾ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com