ಗಿರಿಜನ ವಿದ್ಯಾರ್ಥಿಗಳಿಗೆ ವಾರ್ತಾ ಇಲಾಖೆ ಸೌಲಭ್ಯ: ಲ್ಯಾಪ್‌ಟಾಪ್‌ ಹಾಗೂ ಡಿಜಿಟಲ್‌ ಕ್ಯಾಮೆರಾ ವಿತರಿಸುವ ಯೋಜನೆ

ಉಡುಪಿ: ವಾರ್ತಾ ಇಲಾಖೆ ಗಿರಿಜನ ಉಪಯೋಜನೆಯಡಿ 2013 - 14ನೇ ಸಾಲಿನಲ್ಲಿ ಪತ್ರಿಕೋದ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಲ್ಯಾಪ್‌ಟಾಪ್‌ ಹಾಗೂ ಡಿಜಿಟಲ್‌ ಕ್ಯಾಮೆರಾ ವಿತರಿಸುವ ಯೋಜನೆ ಹಮ್ಮಿಕೊಂಡಿದೆ.

ವಿದ್ಯಾರ್ಹತೆ ನಿಯಮಗಳಲ್ಲಿ ಸಡಿಲಿಕೆ ತರಲಾಗಿದ್ದು, ರಾಜ್ಯದಲ್ಲಿ ಪ್ರಸ್ತುತ ಪೂರ್ಣಾವಧಿಧಿ ಪದವಿ (ಬಿ.ಎ.) ಹಾಗೂ ಸ್ನಾತಕೋತ್ತರ ಪದವಿ (ಎಂ.ಎ. ಪ್ರಥಮ ಹಾಗೂ ಅಂತಿಮ ವರ್ಷ) ಗಳಲ್ಲಿ ಪತ್ರಿಕೋದ್ಯಮ/ಸಮೂಹ ಸಂವಹನ/ವಿದ್ಯುನ್ಮಾನ ಮಾಧ್ಯಮ ಅಧ್ಯಯನ ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಪ್ರಸ್ತುತ ಪತ್ರಿಕೋದ್ಯಮ ಐಚ್ಚಿಕ ವಿಷಯವನ್ನಾಗಿ ನೀಡುವ ರಾಜ್ಯದ ಎಲ್ಲಾ ಸರಕಾರಿ ಪದವಿ ಕಾಲೇಜುಗಳ ಪ್ರಾಚಾರ್ಯರು ಹಾಗೂ ಎಲ್ಲಾ ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಮೇಲೆ ತಿಳಿಸಿರುವಂತೆ ತಮ್ಮ ಕಾಲೇಜಿನ/ ವಿಭಾಗದ ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪಟ್ಟಿಯನ್ನು ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ಸಂ. 17, ಭಗವಾನ್‌ ಮಹಾವೀರ ರಸ್ತೆ, ಬೆಂಗಳೂರು - 560001, ಕಚೇರಿಗೆ ಹಾಗೂ ಇ - ಮೇಲ್‌ scptspinformation@gmail.comಕ್ಕೆ ನ. 30ರ ಒಳಗೆ ಸಲ್ಲಿಸಲು ಕೋರಿದೆ.

ಪಟ್ಟಿಯಲ್ಲಿ ವಿದ್ಯಾರ್ಥಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವ್ಯಾಸಂಗ ಮಾಡುತ್ತಿರುವ ಪದವಿ ಹಾಗೂ ತರಗತಿ, ಜಾತಿ ಹಾಗೂ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಶೇಕಡವಾರು ಅಂಕಗಳ ವಿವರಗಳನ್ನು ನೀಡಬೇಕು. ವಿದ್ಯಾರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com