ಗಂಗೊಳ್ಳಿ ರಾಜ್ಯೋತ್ಸವ ಆಚರಣೆ

ಗಂಗೊಳ್ಳಿ: ಕನ್ನಡ ಭಾಷೆಯ ಬಗೆಗೆ ನಿಜವಾದ ಅಭಿಮಾನ ಕಾಳಜಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿಬರಬೇಕಾದ ಅವಶ್ಯಕತೆಯಿದೆ. ಕನ್ನಡಿಗರು  ನಮ್ಮ ಸಂಕುಚಿತ ಮನೋಭಾವನೆಯನ್ನು ಬಿಟ್ಟು ಹೊರಬರಬೇಕಿದೆ. ನಮ್ಮ ಭಾಷಾ ಶ್ರೀಮಂತಿಕೆಯನ್ನು  ಅರಿತುಕೊಳ್ಳಬೇಕಿದೆ. ಕನ್ನಡದ ಮನಸುಗಳು ನಮ್ಮದಾಗಬೇಕಿದೆ. ಹಾಗಾದಾಗ ಮಾತ್ರ ಕನ್ನಡ ಉಳಿದೀತು. ಕನ್ನಡಿಗರಾಗಿದ್ದುಕೊಂಡು ಕನ್ನಡವನ್ನೇ ಮಾತನಾಡಲು ಬಾರದವರು ನಮ್ಮ ನಡುವೆ ಇರುವುದು ವಿಪರ್ಯಾಸ. ಅ0ತವರು ಕೊಂಚ ತಮ್ಮನ್ನು ವಿಮರ್ಶಿಸಿಕೊಳ್ಳಬೇಕಿದೆ. ಯಾರಿಗೆ ತಮ್ಮ ಮಾತೃಭಾಷೆಯ ಮೇಲೆ ಹಿಡಿತ ಇರುವುದಿಲ್ಲವೋ ಅವರು ಬೇರೆ ಬಾಷೆಯನ್ನು ಸ0ಪೂರ್ಣವಾಗಿ ಕಲಿಯುವುದು ಖಂಡಿತಾ ಸಾಧ್ಯವಿಲ್ಲ ಎಂದು ಗ0ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯ ಪಟ್ಟರು. ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ಗ0ಗೊಳ್ಳಿ ಘಟಕವು ಇಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಕೆ. ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ ಜಿ. ಕಾರ್ಯಕ್ರಮ ನಿವ9ಹಿಸಿದರು. ಆನಂದ, ಭಾಸ್ಕರ, ಲಕ್ಷ್ಮಣ, ಗುರು, ನಾರಾಯಣ, ಮುಕುಂದ, ನಾಗರಾಜ, ರವೀ0ದ್ರ ಪಟೇಲ್ ಉಪಸ್ಥಿತರಿದ್ದರು. ಸ.ವಿ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಕಾರ್ಯಕ್ರಮದ ಬಳಿಕ ಸಿಹಿತಿಂಡಿ ವಿತರಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com