ಗಂಗೊಳ್ಳಿ: ಭಾರತ ರತ್ನ ಪದವಿಯಂತಹ ಪುರಸ್ಕಾರಗಳನ್ನು ಕೊಡಮಾಡುವಾಗ ಸರ್ಕಾರ ಸೂಕ್ತ ಮಾನದಂಡಗಳನ್ನು ಅನುಸರಿಸುವ ಅವಶ್ಯಕತೆಯಿದೆ. ಆಗ ಗೊಂದಲ ಗೋಜಲುಗಳಿಗೆ ಅವಕಾಶವಿರುವುದಿಲ್ಲ. ಸರ್ಕಾರ ಇನ್ನಾದರೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ. ಸಚಿನ್ ಮತ್ತು ಸಿ.ಎನ್ನಾರ್ ರಾವ್ ಅವರಿಗೆ ಸೂಕ್ತವಾಗಿಯೇ ಪ್ರಶಸ್ತಿ ಸಂದಿದೆ. ಅವರ ಜೀವನಾದರ್ಶಗಳು ಎಲ್ಲರಿಗೂ ಅನುಕರಣೀಯ ಎಂದು ವಿದ್ಯಾರ್ಥಿ ಪ್ರತಿನಿಧಿಗಳಾದ ಭಾರದ್ವಾಜ್, ವಿದ್ಯಾಶ್ರೀ ಮತ್ತು ನತಾಶ ಅಭಿಪ್ರಾಯ ಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ತನ್ನ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇತ್ತೀಚಿನ ಭಾರತ ರತ್ನ ಪರಸ್ಕೃತರ ಬಗೆಗಿನ ಅರಿವು ಮೂಡಿಸುವ `ರತ್ನ-ಧಾರೆ' ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಮೊದಲು ಸ.ವಿ.ಕಾಲೇಜಿನ ಉಪನ್ಯಾಸಕರಾದ ಆರ್. ಎನ್ ರೇವಣ್ಕರ್ ಮತ್ತು ಅರುಣ್ ಕುಮಾರ್ ಅವರು ಸಿ.ಎನ್ನಾರ್.ರಾವ್ ಮತ್ತು ತೆ0ಡುಲ್ಕರ್ ಕುರಿತಂತೆ ತಮ್ಮ ವಿಚಾರ ಧಾರೆಗಳನ್ನು ತರೆದಿಟ್ಟರು. ನರೇಂದ್ರ ಎಸ್ ಗ0ಗೊಳ್ಳಿ ಭಾರತ ರತ್ನ ಪ್ರಶಸ್ತಿಯ ಬಗೆಗೆ ಮಾಹಿತಿ ನೀಡಿದರು. ಜೀವಶಾಸ್ತ್ರ ಉಪನ್ಯಾಸಕಿ ಕವಿತಾ ಎಮ್ ಸಿ ಸ್ವಾಗತಿಸಿದರು.ಸ.ವಿ.ಕಾಲೇಜಿನ ಪ್ರಾ0ಶುಪಾಲೆ ಕೆ.ಸರಸ್ವತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಟ್ ಲೋಬೊ ಕಾರ್ಯಕ್ರಮ ನಿವ9ಹಿಸಿದರು.ಸುಗುಣ ಆರ್ ವಂದಿಸಿದರು.
Subscribe to:
Post Comments (Atom)
0 comments:
Post a Comment