ಎನ್.ಎಸ್.ಎಸ್ ವಾರ್ಷಿಕ ಶಿಬಿರ ಸಮಾರೋಪ

ಗಂಗೊಳ್ಳಿ: ಎನ್.ಎಸ್.ಎಸ್ ನಮ್ಮನ್ನು ನಾವು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿಕೊಳ್ಳಲು ನಮ್ಮ ಜೀವನದಲ್ಲಿ ಸಿಗುವ ಒಂದು ಅತ್ಯುತ್ತಮ ಅವಕಾಶ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕಾಗಿದೆ. ಆ ಮೂಲಕ  ಒಂದು ಉತ್ತಮ ಸಮಾಜದ ಕಟ್ಟುವಿಕೆಗೆ ನಾವು ಕಾರಣೀಭೂತರಾಗಬೇಕು  ಎ0ದು ಕುಂದಾಪುರ ಭಂಡಾರಕರ್ಸ್  ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ನಾರಾಯಣ ರಾವ್ ಹೇಳಿದರು. ಅವರು  ಕೊಲ್ಲೂರಿನ  ಶ್ರೀ ಮೂಕಾಂಬಿಕಾ  ದೇವಳದ ಫ್ರೌಡ ಶಾಲೆಯಲ್ಲಿ ನಡೆದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ `ರಾಷ್ಟ್ರೀಯ ಸೇವಾ ಯೋಜನೆ'ಯ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಸಮಾರೋಪ  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮಾರೋಪ ಭಾಷಣ ಮಾಡುತ್ತಾ ಮಾತನಾಡಿದರು. ಸ.ವಿ.ಕಾಲೇಜಿನ ಉಪನ್ಯಾಸಕರಾದ ಆರ್. ಎನ್ ರೇವಣ್‍ಕರ್  ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎನ್.ಸದಾಶಿವ ನಾಯಕ್ ಹಾಗು ಶ್ರೀಮತಿ ಕೀತ9ನಾ ನಾಯಕ್ ಅವರು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.ಶಿಬಿರಾರ್ಥಿಗಳಾದ ಅಂಕುಶ್ , ಪವಿತ್ರ, ಪಲ್ಲವಿ, ಪ್ರಥ್ವಿ ರಾಜೇ0ದ್ರ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸ.ವಿ.ಕಾಲೇಜಿನ  ಪ್ರಾಂಶುಪಾಲೆ ಕೆ.ಸರಸ್ವತಿ ರಾವ್ ಅಧ್ಯಕ್ಷತೆ ವಹಿಸಿದ್ದರು, ಉಪನ್ಯಾಸಕರಾದ  ನಾರಾಯಣ್ ನಾಯ್ಕ್. ಸುಗುಣ ಆರ್, ಗ್ರಂಥಪಾಲಕಿ ಶಾಂತಲಾ ಉಪಸ್ಥಿತರಿದ್ದರು. .ಥಾಮಸ್ ಪಿ.ಎ ಕಾರ್ಯಕ್ರಮ ನಿರೂಪಣೆ ಮಾಡಿದರು.ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಭಾಸ್ಕರ ಶೆಟ್ಟಿ  ವಂದಿಸಿದರು.”


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com