ಚಪ್ಪಲಿಯಯೊಳಗೆ ಚಿನ್ನ ಸಾಗಾಟ..! ಸೆರೆ

ಮಂಗಳೂರು: ಭಿನ್ನ ಭಿನ್ನ ತಂತ್ರಗಾರಿಕೆ ನಡೆಸಿಕೊಂಡು ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಇದೀಗ ಹೊಸ ಸೇರ್ಪಡೆಯಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಮತ್ತು ಡಿಆರ್‌ಐ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ಚಪ್ಪಲಿನ ಬೆಲ್ಟ್ನೊಳಗೆ ಚಿನ್ನದ ನಾಣ್ಯಗಳನ್ನು ಇಟ್ಟು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ, ಒರ್ವನನ್ನು ಬಂಧಿಸಿದ್ದಾರೆ.
   ಭಟ್ಕಳದ ಮನಿರ್‌ ಹಸನ್‌ ಎಂಬಾತ ಚಿನ್ನದ ಬಿಸ್ಕತ್ತು ಹಾಗೂ ನಾಣ್ಯಗಳನ್ನು ಚಪ್ಪಲಿಯ ಬೆಲ್ಟ್ನೊಳಗೆ ತುರುಕಿಸಿ ದುಬೈನಿಂದ ತಂದಿದ್ದ. ವಿವಿಧ ರೀತಿಯ ತಂತ್ರಗಾರಿಕೆಯ ಮೂಲಕ ದುಬಾೖನಿಂದ ಹಲವು ಬಾರಿ, ಹಲವು ಜನರು ಕಸ್ಟಮ್ಸ್‌ ಮತ್ತು ಡಿಆರ್‌ಐ ಕೈಗೆ ಸಿಕ್ಕಿ ಬಿದ್ದು, ಚಿನ್ನ ಸಾಗಾಟದ ಪ್ರಕರಣ ಬಯಲಾಗಿತ್ತು. ಇದೀಗ ಹೊಸ ತಂತ್ರಗಾರಿಕೆ ಮಾಡಿದ ಹಸನ್‌ ಚಪ್ಪಲಿಯ ಬೆಲ್ಟ್ನೊಳಗೆ ಚಿನ್ನ ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

ದುಬೈನಿಂದ ರಾತ್ರಿ ಹೊರಟು ಬುಧವಾರ ಮಂಗಳೂರು ತಲುಪಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದಿಳಿದ ಮನಿರ್‌ ಹಸನ್‌ನ ಚಪ್ಪಲಿಯಲ್ಲಿದ್ದ 116.64 ಗ್ರಾಂ. ತೂಕದ ಒಂದು ತೊಲೆ ಚಿನ್ನದ ಗಟ್ಟಿ ಮತ್ತು 8 ಗ್ರಾಂ. ತೂಕದ ಒಂದು ಚಿನ್ನದ ನಾಣ್ಯ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ 3,84,744 ರೂ. ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com