ಡಿ.1ರಂದು ಸಂಕೋಲೆ ಬಿಗಿದು ಈಜು: ಗಿನ್ನಿಸ್‌ ಗೆ ಗೋಪಾಲ ಖಾರ್ವಿ ಸಿದ್ಧತೆ

ಉಡುಪಿ: ಗಿನ್ನಿಸ್‌ ದಾಖಲೆಗಾಗಿ ಗೋಪಾಲ ಖಾರ್ವಿ ಅವರು ಡಿ.1ರಂದು ತನ್ನ ಕೈಗಳನ್ನು ಬೆನ್ನಹಿಂದೆ ಕೋಳದಿಂದ ಬಂಧಿಸಿ ಕಾಲುಗಳನ್ನು ಕಬ್ಬಿಣದ ಸಂಕೋಲೆಯಿಂದ ಬಿಗಿದು ಮಲ್ಪೆ ಸೈಂಟ್‌ ಮೆರೀಸ್‌ ದ್ವೀಪದಿಂದ ಮಲ್ಪೆ ಬೀಚ್‌ವರೆಗೆ 3.08 ಕಿ.ಮೀ ಈಜುವ ಸಾಹಸ ನಡೆಸಲಿದ್ದಾರೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದು ಗಿನ್ನೆಸ್‌ ಅಧಿಕಾರಿಗಳು ಈಗಾಗಲೇ ಖಾರ್ವಿ ಅವರು ಈಜಲಿರುವ ಸಮುದ್ರ ಭಾಗದ ಸರ್ವೇ ನಡೆಸಿದ್ದಾರೆ.
    'ಕಳೆದ ಬಾರಿ ಕೂಡ ನಾನು ಇದೇ ರೀತಿ ಈಜಿ ಸಾಧನೆ ನಡೆಸಿದ್ದೆ. ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ಆದರೆ ಅಂದು ಜಿಪಿಎಸ್‌ ಕ್ಯಾಮರಾ ಅಳವಡಿಸಿಕೊಳ್ಳದ್ದರಿಂದ ಸಾಧನೆ ಗಿನ್ನೆಸ್‌ ದಾಖಲೆಯಾಗಲಿಲ್ಲ. ಹಾಗಾಗಿ ಈ ಬಾರಿ ಎರಡನೇ ಬಾರಿ ಪ್ರಯತ್ನಿಸುತ್ತಿದ್ದು ಲಂಡನ್‌ನಿಂದಲೇ ಅಧಿಕಾರಿಗಳು ಆಗಮಿಸಲಿದ್ದಾರೆ. ಡಿ.1ರಂದು ಬೆಳಗ್ಗೆ 7 ಗಂಟೆಗೆ ಈಜು ಆರಂಭಿಸಲಿದ್ದೇನೆ. ಸ್ವಾಮೀಜಿ, ಸಚಿವರು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರುತ್ತಾರೆ. ತಾಂತ್ರಿಕ ಸಲಹೆಗಾರರಾಗಿ ಪ್ರಾಧ್ಯಾಪಕ ಡಾ| ವೈ.ರವೀಂದ್ರನಾಥ ರಾವ್‌ ಹಾಗೂ ಗಿನ್ನೆಸ್‌ ದಾಖಲೆ ಬರೆದಿರುವ ಡೇನಿಯಲ್‌ ಮೊಂಥೆರೋ ಸಹಕರಿಸಲಿದ್ದಾರೆ' ಎಂದು ಖಾರ್ವಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
   ಸುಜಾತ ಜಿ.ಖಾರ್ವಿ, ಅಣ್ಣಪ್ಪ ಬಿ.ಕುಂದರ್‌, ನಾರಾಯಣ ಬಂಗೇರ, ರಾಜಾ ಖಾರ್ವಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com