ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ಕುರಿತು ಉಪನ್ಯಾಸ

ಕುಂದಾಪುರ: ನಾಗರಿಕ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ಅರಿತು ಮೂಲಭೂತ ಕರ್ತವ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ನಾಗರಿಕನಾಗಲು ಸಾದ್ಯ ಎಂದು ನಿವೃತ್ತ ಪ್ರಾಂಶುಪಾಲ ಎಸ್.ಜನಾರ್ದನ್ ಮರವಂತೆ ಹೇಳಿದರು.
      ಅವರು  ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸದ ಮೂಲಕ ಮಾಹಿತಿ ನೀಡಿ ಮಾತನಾಡಿದರು.
ಮಾನವ ಹಕ್ಕುಗಳು ಮನುಷ್ಯನ ಸಹಜ, ನೈಸರ್ಗಿಕ ಮತ್ತು ಪ್ರತ್ಯೇಕಿಸಲಾಗದ ಹಕ್ಕುಗಳಾಗಿದ್ದು, ಆತನಿಗೆ ಘನತೆ ಮತ್ತು ಗೌರವವನ್ನು ತಂದುಕೊಟ್ಟಿದೆ. ಪ್ರತಿಯೊಬ್ಬನಿಗೂ ಯಾವುದೇ ಜಾತಿ,ಮತ, ವರ್ಣ,ಜನಾಂಗ, ಲಿಂಗ, ಭಾಷೆ, ರಾಷ್ಟ್ರೀಯ ತಾರತಮ್ಯವಿಲ್ಲದೆ ವಿಶ್ವಮಾನ್ಯ ಹಕ್ಕು ಇದಾಗಿದೆ.
      ಸರಕಾರ ಹೇಗೆ ಆಡಳಿತ ನಡೆಸುತ್ತದೆ. ಅದು ನ್ಯಾಯಯುತವಾಗಿ ನಡೆಯುತ್ತಿದೆಯೇ. ಕಾನೂನಿನ ಉಲ್ಲಂಘನೆಯಾಗಿದೆಯೆ ಎಂಬುದರ ಬಗ್ಗೆ ನಾಗರಿಕರನ್ನು ಸಶಕ್ತರನ್ನಾಗಿ ಮಾಡಿ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉಂಟುಮಾಡುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಸಿ.ಸೀತಾರಾಮ ಮಧ್ಯಸ್ಥ ಸಭೆಯ ಅಧ್ಯಕ್ಷತೆ ವಹಿಸಿದ್ದರು.
    ಜನತಾ ಪ್ರೌಢ ಶಾಲಾ ಹಿರಿಯ ಶಿಕ್ಷಕ ಮೋಹನ್‍ದಾಸ್ ಶೆಟ್ಟಿ, ಹಿರಿಯ ಉಪನ್ಯಾಸಕ ಬಿ.ಭೋಜರಾಜ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಚಂದನ್ ಪರಿಚಯಿಸಿದರು. ವಿದ್ಯಾರ್ಥಿ ಅರುಣಾ ನಿರೂಪಿಸಿ, ವಿದ್ಯಾರ್ಥಿನಿ ಇಂಚರ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com