ಕಾಳಾವರ ಷಷ್ಠಿ ಆಮಂತ್ರಣ ಪತ್ರಿಕೆ ಅನಾವರಣ

ಕಾಳಾವರ: ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಡಿಸೆಂಬರ್ 8 ಮತ್ತು 9ರಂದು ನಡೆಯುವ ಹಿರಿಷಷ್ಟಿ ಮಹೋತ್ಸವದಲ್ಲಿ ಸೇವಾ ಕಾರ್ಯಕ್ರಮಗಳು ಯಾವ ರೀತಿ ನಡೆಯಬೇಕು, ಭಕ್ತರಿಗೆ ನೂಕು ನುಗ್ಗಲನ್ನು ತಪ್ಪಿಸಿ ದೇವರ ದರ್ಶನ ಸಿಗಲು ಅನುಕೂಲಕರವಾದ ವಾತಾವರಣ ಒದಗುವಂತೆ ಮಾಡುವ ವಿಷಯದಲ್ಲಿ ಚರ್ಚಿಸಲು ನ.14ರಂದು ಉತ್ಸವ ಸಮಿತಿಯ ಸಭೆಯು ದೇವಳದಲ್ಲಿ ಅಧ್ಯಕ್ಷ ಪ್ರೊ. ಶಂಕರ್ ರಾವ್ ಕಾಳಾವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ತಾಲೂಕು ಪಂಚಾಯತ್ ಸದಸ್ಯ ದೀಪಕ್ ಕುಮಾರ್ ಶೆಟ್ಟಿ ಅನಾವರಣಗೊಳಿಸಿದರು.
     ಆಮಂತ್ರಣ ಪತ್ರಿಕೆಯಲ್ಲಿರುವ ಎಲ್ಲ ಸೇವಾಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಚರ್ಚಿಸಿ ಸ್ವಯಂ ಸೇವಕರ ಮೂಲಕ ಎಲ್ಲ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಹಿರಿಯರಾದ ಕೋಣಿ ನರಸಿಂಹ ಕಾರಂತ, ಎಚ್.ದಯಾನಂದ ಹೆಗ್ಡೆ,  ರತ್ನಾಕರ ಶೆಟ್ಟಿ, ರಾಮಚಂದ್ರ ನಾವಡ, ಸುರೇಶ ಎನ್.ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಭರತ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ಗಜೇಂದ್ರ ಆಚಾರ್, ಶ್ರೀನಿವಾಸ ಕಾಳಾವರ್, ಕೆ.ಚಂದ್ರಶೇಖರ ಶೆಟ್ಟಿ ಹಾಗೂ ಉತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
     ಪ್ರೊ. ಶಂಕರ್ ರಾವ್ ಕಾಳಾವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಕುಮಾರ್ ಶೆಟ್ಟಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com