ಕೊಡಿಹಬ್ಬ: ಮನ್ಮಹಾರಥೋತ್ಸವದಲ್ಲಿ ಭಕ್ತಸಾಗರ

ಕುಂದಾಪುರ: ಕರಾವಳಿ ಜಿಲ್ಲೆಯ ಅತಿ ದೊಡ್ಡ ಜಾತ್ರೆ ಎಂದೆ ಬಿಂಬಿಸಲ್ಪಟ್ಟಿರುವ ಧ್ವಜಪುರ ಖ್ಯಾತಿಯ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾರಥೋತ್ಸವ(ಕೊಡಿಹಬ್ಬ) ಭಾನುವಾರ ಸಕಲ ಸಂಭ್ರಮದಿಂದ ಜರುಗಿತು. ರಥೋತ್ಸವದಲ್ಲಿ ಸಹಸ್ರಾರು ಮಂದಿ ಜಮಾಯಿಸಿದ್ದರಿಂದ ದೇವಳ ರಥಬೀದಿಯಲ್ಲಿ ಭಕ್ತಸಾಗರವೇ ನೆರೆದಿತ್ತು. ಬೆಳಗ್ಗೆ 11.36ಕ್ಕೆ ಮಕರ ಲಗ್ನ ಸುಮೂಹರ್ತದಲ್ಲಿ ಶ್ರೀದೇವರ ರಥೋತ್ಸವ ನೆರವೇರಿತು. ವೇದಮೂರ್ತಿ ಪ್ರಸನ್ನಕುಮಾರ ಐತಾಳ್ ಧಾರ್ಮಿಕ ವಿ ನೆರವೇರಿಸಿದರು. ಶ್ರೀದೇವರ ರಥಾರೋಹಣ ಆಗುತ್ತಿರುವಂತೆಯೇ ಸಂಪ್ರದಾಯದಂತೆ ಗರುಡ ದರ್ಶನ ಆಗಿದ್ದು ಭಾವುಕ ಭಕ್ತರು ಜೆಕಾರದೊಂದಿಗೆ ರಥ ಏಳೆದು ಪುನೀತರಾದರು. ಸಂಜೆ 5.30ಕ್ಕೆ ನಡೆದ ರಥೋತ್ಸವದಲ್ಲಿಯೂ ಸರಿಸುಮಾರು 60 ಸಾವಿಕ್ಕೂ ಮಿಕ್ಕಿ ಭಕ್ತರು ನೆರೆದಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ಸದಸ್ಯರಾದ ಎನ್.ರಾಘವೇಂದ್ರರಾವ್ ನೇರಂಬಳ್ಳಿ, ವೇದಮೂರ್ತಿ ಪ್ರಸನ್ನಕುಮಾರ ಐತಾಳ್, ಬಿ.ಎಂ.ಗುರುರಾಜರಾವ್, ಶ್ರೀನಿವಾಸ ಕುಂದರ್, ವಿನೋದ್ ಶೇಟ್, ಗೋಪಾಲ ಬೀಜಾಡಿ, ಕುಸುಮ ದೇವಾಡಿಗ, ವನಜ, ಗೌರವ ಸಲಹೆಗಾರ ಗಣೇಶ ಭಟ್ ಗೋಪಾಡಿ ಇದ್ದರು. ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. 

ಗರುಡ ದರ್ಶನ: ಕೋಟಿಲಿಂಗೇಶ್ವರ ದೇವರ ರಥೋತ್ಸವಕ್ಕೆ ಮೊದಲು ಗರುಡ ದರ್ಶನ ಆಗುವುದು ವಾಡಿಕೆ. ಭಾನುವಾರ ನಡೆದ ರಥೋತ್ಸವದಲ್ಲಿಯೂ ಈ ವಿದ್ಯಮಾನ ಘಟಿಸಿತು. ಬೆಳಗ್ಗಿನ ರಥೋತ್ಸವದ ವೇಳೆ ರಥ ಹೊರಡುವ ಮೊದಲು ಧಾರ್ಮಿಕ ವಿ ನೆರವೇರಿಸಿದ ತಕ್ಷಣವೇ ಗರುಡ ದರ್ಶನ ಆಗಿದ್ದು ಅದು ರಥಕ್ಕೆ ಸುತ್ತು ಹೊಡೆಯುತ್ತಿರುವಂತೆಯೇ ಭಾವುಕ ಭಕ್ತರು ಕೋಟಿಲಿಂಗೇಶ್ವರನನ್ನು ಭಜಿಸಿ ರಥ ಏಳೆದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com