ಹೈನುಗಾರಿಕೆ ನಿರ್ವಹಣಾ ತರಬೇತಿ ಕಾರ್ಯಾಗಾರ

ಕುಂದಾಪುರ: ಆಧುನಿಕ ಹೈನುಗಾರಿಕೆಯ ವಿಧಿವಿಧಾನಗಳನ್ನು ಅಳವಡಿಸಿಕೊಂಡು ಹೈನುಗಾರಿಕೆ ಮಾಡಿದರೆ ಲಾಭ ಪಡೆಯಲು ಸಾಧ್ಯವಿದೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟ ಉಪವ್ಯವಸ್ಥಾಪಕ ಡಾ. ಮನೋಹರ್ ಹೇಳಿದರು. 

ಕರ್ನಾಟಕ ಹಾಲು ಮಹಾಮಂಡಳ ತರಬೇತಿ ಸಂಸ್ಥೆ ಮೆಸೂರು ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಜಂಟಿ ಆಶ್ರಯದಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಹಾಲು ಉತ್ಪಾದಕರಿಗಾಗಿ ಹಮ್ಮಿಕೊಂಡ ಎರಡು ದಿನದ ಹೈನುಗಾರಿಕೆ ನಿರ್ವಹಣಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು ಸಾಧ್ಯ. ರಾಸುಗಳ ಪೋಷಣೆಯ ಜೊತೆಗೆ ಅದರ ಉತ್ಪನ್ನಗಳ ಬಳಕೆಯ ಬಗ್ಗೆ ಮಾಹಿತಿ ಹೊಂದಿರಬೇಕು. ಉತ್ಪಾದಕರು ಎಲ್ಲ ರೀತಿಯ ಮಾಹಿತಿ ಪಡೆದುಕೊಂಡಾಗ ಮಾತ್ರ ಉತ್ತಮ ಹೆನುಗಾರಿಕೆ ಸಾಧ್ಯ ಎಂದರು. 

ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ.ರಾಜೀವ ಶೆಟ್ಟಿ ಮತ್ತು ಮಹಾದೇವಸ್ವಾಮಿ ಆಧುನಿಕ ಹೆನುಗಾರಿಕೆಯ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿಗಳಾದ ರಾಜಾರಾಮ ಉಪ್ಪಿನಕುದ್ರು, ಅಬ್ದುಲ್ ಶಮೀರ್ ಉಪಸ್ಥಿತರಿದ್ದರು. ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ ಎ. ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com