ಹೋಲಿ ರೋಜರಿ ಇಗರ್ಜಿ: ಪರಮಪ್ರಸಾದದ ಆರಾಧನೆ

ಕುಂದಾಪುರ: 400 ವರ್ಸಗಳ ಇತಿಹಾಸ ಹೊಂದಿರುವ ಇಲ್ಲಿನ ಚರ್ಚ್‌ರಸ್ತೆಯ ಹೋಲಿ ರೋಜರಿ ಮಾತೆ ಇಗರ್ಜಿಯ ತೆರಾಲಿ ಹಬ್ಬ ಪ್ರಯುಕ್ತ ಶನಿವಾರ ಸಂಜೆ ಕ್ರಿಸ್ತರ ಬೆಳಕಿನಲ್ಲಿ ಸಹ ಬಾಳ್ವೆಯ ಹೆಜ್ಜೆಗಳು ಏಂಬ ಧ್ಯೇಯದೊಂದಿಗೆ ಪರಮ ಪ್ರಸಾದ ಆರಾಧನೆ ನಡೆಯಿತು. 

ಇಗರ್ಜಿಯಲ್ಲಿ ಪವಿತ್ರ ಬಲಿದಾನದ ಪೂಜೆ ಅರ್ಪಿಸಿದ ತರುವಾಯ ಭಕ್ತರು ಹಾಗೂ ಧರ್ಮಭಗಿನಿಯರೊಡನೆ ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಅಲಂಕತ ಕೊಡೆ, ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಪರಮ ಪ್ರಸಾದದ ಮೆರವಣಿಗೆ ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ನಡೆಯಿತು. 

ನಂತರ ಪರಮ ಪ್ರಸಾದದೊಡನೆ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೆದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನಡೆಯಿತು. ಉಡುಪಿ ಕಲ್ಮಾಡಿ ಇಗರ್ಜಿಯ ಧರ್ಮಗುರು ವಂದನೀಯ ಆಲ್ಬನ್ ಡಿಸೋಜಾ ನೇರವೇರಿಸಿ ಮಾತನಾಡಿ, ಏಸು ಈ ಪ್ರಪಂಚಕ್ಕೆ ಧರ್ಮ ಸ್ಥಾಪಿಸಲು ಬಂದದ್ದಲ್ಲ. ಅವರು ದೇವರ ರಾಜ್ಯ ಸ್ಥಾಪಿಸಲು, ಪಾಪದ ಕಡೆ ಮುಖ ಹೊತ್ತ ನಮ್ಮನ್ನು ಸರಿ ದಾರಿ ತೋರಿಸಿ ಸ್ವರ್ಗ ರಾಜ್ಯದತ್ತ ಮಾರ್ಗ ತೋರಿಸಲು ಬಂದವರು. ನಾವು ಇತರರೊಡನೆ ಸಹನೆ, ಪ್ರೀತಿ, ಸಹಬಾಳ್ವೆ ನಡೆಸಬೇಕು, ಏಸು ಕ್ರಿಸ್ತರು ತಮ್ಮ ಜೀವವನ್ನೆ ಬಲಿದಾನ ಅರ್ಪಿಸಿ ನಮಗೆ ಮುಕ್ತಿಯ ಬೆಳಕಾದರು. ಅವರ ಅನುಯಾಯಿಗಳಾದ ನಾವು ಕ್ರಿಸ್ತರ ಬೆಳಕಿನಲ್ಲಿ ಸಹ ಬಾಳ್ವೆಯ ಹೆಜ್ಜೆಗಳೊಡನೆ ತಮ್ಮ ಜೀವನವನ್ನು ಇತರರ ಒಳ್ಳೆತನಕ್ಕೆ ಮುಡುಪಾಗಿಡಬೇಕು ಎಂದರು. 

ಕುಂದಾಪುರ ಹೋಲಿ ರೋಜರಿ ಮಾತೆ ಇಗರ್ಜಿಯ ಧರ್ಮಗುರು ಅನಿಲ್ ಡಿಸೋಜಾ ಮತ್ತು ಸಂತ ಮೇರಿಸ್ ಜೂ.ಕಾಲೇಜಿನ ಪ್ರಿನ್ಸಿಪಾಲ್ ಧರ್ಮಗುರು ಪ್ರವೀಣ್ ಅಮತ್ ಮಾರ್ಟಿಸ್ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com