ಜೇಸಿ ವಿಶ್ವ ಸಮ್ಮೇಳನಕ್ಕೆ ಸದಾನಂದ ನಾವಡ

ಕುಂದಾಪುರ: ಭಾರತೀಯ ಜೇಸಿಸ್‌ನ ರಾಷ್ಟ್ರೀಯ ಉಪಾಧ್ಯಕ್ಷರಾದ ಸದಾನಂದ ನಾವಡ ಅವರು ಸೌತ್‌ ಅಮೇರಿಕದ ಬ್ರೆಝಿಲ್‌ನ ರಿಯೋ ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ಜೀಸಿಸ್‌ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
    123 ದೇಶಗಳಿಂದ ಜೇಸಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಸಮ್ಮೇಳನ ನವಂಬರ್‌ 4ರಿಂದ 9ರ ವರೆಗೆ ನಡೆಯಲಿದೆ.
    ಗೆಲಾಕ್ಸಿ ಸ್ಪೋರ್ಟ್ಸ್ ಕಂಪನಿ ಆಡಳಿತ ನಿರ್ದೇಶಕ, ಜೀಸಿ ವಲಯ 15ರ ಪೂರ್ವಾಧ್ಯಕ್ಷರಾಗಿ ಹತ್ತಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ನಾವಡರು ಭಾಗವಹಿಸುತ್ತಿರುವ 7ನೇ ಅಂತರಾಷ್ಟ್ರೀಯ ಸಮ್ಮೇಳನ ಇದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com