ಕುವೆಂಪು ವಿ.ವಿ. ಕೋರ್ಸುಗಳಿಗೆ ಅರ್ಜಿ ಅಹ್ವಾನ

ಮೂಡಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದಡಿ ಕುವೆಂಪು ವಿಶ್ವ ವಿದ್ಯಾಲಯದ ದೂರ ಶಿಕ್ಷಣ ಕೇಂದ್ರ 2013 - 14 ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪದವಿ ತರಗತಿಗಳಾದ ಬಿ.ಎ., ಬಿ.ಕಾಂ., ಬಿ.ಎಸ್‌.ಸಿ. (ಪಿಸಿಎಂ, ಸಿಬಿಝಡ್‌), ಬಿ.ಬಿ.ಎಂ., ಸ್ನಾತಕೋತ್ತರ ಪದವಿಗಳಾದ ಎಂ.ಎ. (ಕನ್ನಡ, ಇಂಗ್ಲೀಷ್‌, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಶಿಕ್ಷಣ), ಎಂ.ಕಾಂ., ಎಂ.ಬಿ.ಎ., ಮತ್ತು ಎಂ.ಎಸ್‌.ಸಿ. (ಬೌತಶಾಸ್ತ್ರ, ರಸಾಯನ ಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಪರಿಸರ ವಿಜ್ಞಾನ, ಗಣಿತಶಾಸ್ತ್ರ, ಬಯೋಟೆಕ್ನಾಲಜಿ, ಅನ್ವಯಿಕ ರಸಾಯನ ಶಾಸ್ತ್ರ), ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದ ಬಿಎಲ್‌ಐಎಸ್‌ಸಿ, ಎಂಎಲ್‌ಐಎಸ್‌ಸಿ, ಹಾಗೂ ಪಿಜಿ ಡಿಪ್ಲೋಮಾ, ಮಾನಸ ಸಂಸ್ಥೆ ಆಶ್ರಯದಲ್ಲಿ ಎಂ.ಎಸ್‌.ಎಂ.ಎ. ಮತ್ತು ಡಿಪ್ಲೊಮಾ ಕೋರ್ಸ್‌ಗಳು ಹಾಗೂ ಪಿ.ಜಿ. ಡಿಪ್ಲೋಮಾ ಕೋರ್ಸ್‌ಗಳಾದ ಕನ್ನಡ ಪತ್ರಿಕೋದ್ಯಮ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ಸಂಸ್ಥೆ ಹಾಗೂ ಮಾರ್ಕೆಟಿಂಗ್‌ ನ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌, ಒಂದು ವರ್ಷದ ಯುಜಿ ಡಿಪ್ಲೋಮಾ (ಪಂಚಾಯತ್‌ರಾಜ್‌), ಎಂಎ (ಸೈಕ್ಯಾಟ್ರಿಕ್‌, ಸೋಶಿಯಲ್‌ ವರ್ಕ್‌ ಮತ್ತು ಸೈಕಾಲಜಿ ಇನ್‌ ಚೈಲ್ಡ್‌ ಮೆಂಟಲ್‌ ಹೆಲ್ತ್‌), ಎಂಎಸ್‌ (ಕೌನ್ಸೆಲಿಂಗ್‌ ಆಂಡ್‌ ಸೈಕೋಥೆರಪಿ, ಸೈಕೋ ಸೋಶಿಯಲ್‌ ರಿಹ್ಯಾಬಿಲಿಟೇಶನ್‌ ಮತ್ತು ಸೆಕ್ಸುಯಾಲಿಟಿ ಮತ್ತು ಸೆಕ್ಸುಯಲ್‌ ಕೌನ್ಸಿಲಿಂಗ್‌), ಪಿಜಿ ಡಿಪ್ಲೋಮಾ ಮೆಂಟಲ್‌ ಹೆಲ್ತ್‌ ಇನ್‌ ಫೂರೆನ್ಸಿಕ್‌ ಸೈಕಾಲಜಿ, ಮೆಂಟಲ್‌ ಹೆಲ್ತ್‌ ಇನ್‌ ಪ್ರೊಫೆಶನಲ್‌ ಕೌನ್ಸೆಲಿಂಗ್‌ ಮತ್ತು ಸೈಕೋಥೆರಪಿ, ಮೆಂಟಲ್‌ ಹೆಲ್ತ್‌ ಇನ್‌ ಸೆಕ್ಸುಯಾಲಿಟಿ ಮತ್ತು ಸೆಕ್ಸುಯಲ್‌ ಕೌನ್ಸಿಲಿಂಗ್‌ ವಿಷಯದಲ್ಲೂ ಅಧ್ಯಯನ ನಡೆಸಲು ಪ್ರವೇಶ ಪಡೆದುಕೊಳ್ಳಬಹುದು.

ಐಎಸ್‌ಬಿಎಂಸ್‌ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಇಎಂಬಿಎ ಮತ್ತು ಎಂಎಚ್‌ಆರ್‌ಎಂ ಕೋರ್ಸ್‌ಗಳಿಗೆ ಆಸಕ್ತರು ಪ್ರವೇಶ ಪಡೆಯಬಹುದು. ಆಳ್ವಾಸ್‌ನ ಅಧ್ಯಯನ ಕೇಂದ್ರದಿಂದ ಅರ್ಜಿ ಪಡೆದು ಭರ್ತಿ ಮಾಡಿ ಡಿ. 31ರ ಒಳಗೆ ದಂಡ ರಹಿತ ಹಾಗೂ ಜನವರಿ 15ರಿಂದ 200 ರೂಪಾಯಿ ದಂಡಸಹಿತ ಪ್ರವೇಶಾತಿ ಪಡೆದುಕೊಳ್ಳಬಹುದು. ವಿವರಗಳಿಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿ (08258-261274; 8762125582) ಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com