ಬ್ಯಾರಿಸ್ ಗ್ರೀನ್ ಅವೆನ್ಯೂ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ

ಕುಂದಾಪುರ: ಕುಂದಾಪುರ ಮೂಲದ ಬ್ಯಾರೀಸ್ ಗ್ರೂಪ್ ವತಿ ಯಿಂದ ಕೋಟೇಶ್ವರದಲ್ಲಿ ನಿರ್ಮಾಣ ವಾಗಲಿರುವ ‘ಗ್ರೀನ್ ಎವೆನ್ಯೂ’ ವಸತಿ ಸಮುಚ್ಚಯಕ್ಕೆ ಶನಿವಾರ ಚಾಲನೆ ನೀಡಲಾಯಿತು.
      ರಾಜ್ಯ ನಗರಾಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಯೋಜನೆಯ ಬ್ರೋಷರ್ ಬಿಡುಗಡೆ ಗೊಳಿಸಿ, ‘ಗ್ರೀನ್ ಎವೆನ್ಯೂ’ ಕೋಟೇಶ್ವರ ಅಭಿವೃದ್ಧಿಗೆ ನೀಡುತ್ತಿ ರುವ ದೊಡ್ಡ ಕೊಡುಗೆಯಾಗಿದ್ದು, ಈ ಮೂಲಕ ಈ ಪ್ರದೇಶದ ಪ್ರಗತಿಗೆ ಚಾಲನೆ ದೊರೆತಂತಾಗಿದೆ. ಅಲ್ಲದೆ ಬ್ಯಾರೀಸ್ ಶಿಕ್ಷಣ ಹಾಗೂ ಕಟ್ಟಡ ಕಾಮಗಾರಿಯಲ್ಲಿ ಇಡೀ ರಾಜ್ಯಕ್ಕೆ ಮಹತ್ತರ ಕೊಡುಗೆ ನೀಡಿದೆ ಎಂದರು.
     ದೇಶದಲ್ಲಿ ಶೇ.33ರಷ್ಟು ನಗರವಾಸಿ ಗಳಿದ್ದರೆ, ರಾಜ್ಯದಲ್ಲಿ ಅವರ ಸಂಖ್ಯೆ ಶೇ.48 ಆಗಿದೆ. ಮುಂದಿನ 10ವರ್ಷ ಗಳಲ್ಲಿ ಇದು ಶೇ.50ಕ್ಕೇರಲಿದೆ. ಆದುದರಿಂದ ಇವರಿಗೆ ಮನೆ ಸೇರಿ ದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಗತ್ಯ. ರಾಜ್ಯದಲ್ಲಿ ಅತಿಹೆಚ್ಚು ಶೇ.27ರಷ್ಟು ಅನಿವಾಸಿಗಳಿ ರುವುದು ಉಡುಪಿ ಜಿಲ್ಲೆಯಲ್ಲಿ. ಇವರ ಬೇಡಿಕೆಗಳನ್ನು ಪೂರೈಸಬೇಕಾಗಿದೆ ಎಂದವರು ಹೇಳಿದರು.
      ಕೋಟೇಶ್ವರ, ಆನಗಳ್ಳಿ, ಬಸ್ರೂರು ಪ್ರದೇಶಗಳನ್ನು ಸೇರಿಸಿ ಕುಂದಾಪುರ ವನ್ನು ನಗರಸಭೆಯನ್ನಾಗಿ ಘೋಷಣೆ ಮಾಡುವ ಉದ್ದೇಶ ಇದೆ. ಕುಂದಾಪುರ ದಲ್ಲಿ ಒಳಚರಂಡಿ ಹಾಗೂ ಕುಡಿ ಯುವ ನೀರಿನ ವ್ಯವಸ್ಥೆಗಾಗಿ 90 ಕೋ.ರೂ. ಅನುದಾನ ಒದಗಿಸಲಾಗು ವುದು ಎಂದು ಅವರು ತಿಳಿಸಿದರು.
      ಮುಖ್ಯ ಅತಿಥಿಗಳಾಗಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟೇಶ್ವರ ಗ್ರಾಪಂ ಅಧ್ಯಕ್ಷ ರಾಜ ಶೇಖರ ಶೆಟ್ಟಿ ಶುಭ ಹಾರೈಸಿದರು. ಹಾಜಿ ಕೆ.ಮುಹಿಯುದ್ದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್, ಸಂಸ್ಥೆಯ ನಿರ್ದೇಶಕರಾದ ಅಶ್ರಫ್ ಬ್ಯಾರಿ ಹಾಗೂ ಮಝರ್ ಬ್ಯಾರಿ ಉಪಸ್ಥಿತರಿದ್ದರು. ಮೊದಲ ಫ್ಲಾಟ್ ಖರೀದಿಸಿದ ನೌಶದ್‌ರಿಗೆ ಅಲೋಟ್‌ಮೆಂಟ್ ಪತ್ರವನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಸಮಾಜ ಸೇವಕ ರಘುನಾಥ್ ಭಟ್ ಹಾಗೂ ಸ್ಥಳದ ಮಾಲಕ ಸುಲೈಮಾನ್ ಬೀಜಾಡಿಯವರನ್ನು ಸನ್ಮಾನಿಸಲಾ ಯಿತು. ಸಂಸ್ಥೆಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಸ್ವಾಗತಿಸಿ, ಪ್ರಾಸ್ತಾ ವಿಕವಾಗಿ ಮಾತನಾಡಿದರು. ಎಕ್ಸಿ ಕ್ಯೂಟಿವ್ ಡೈರೆಕ್ಟರ್ ಸಿದ್ದೀಕ್ ಬ್ಯಾರಿ ವಂದಿಸಿದರು. ಸಂದೀಪ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರಥಮ ಪರಿಸರ ಸ್ನೇಹಿ ಕಟ್ಟಡ
    ಗ್ರೀನ್ ಎವೆನ್ಯೂ ಉಡುಪಿ ಜಿಲ್ಲೆಯ ಪ್ರಪ್ರಥಮ ಪರಿಸರ ಸ್ನೇಹಿ ಕಟ್ಟಡ ವಾಗಿದ್ದು, ಗುಣ ಮಟ್ಟಕ್ಕೆ ಆದ್ಯತೆ ನೀಡಿ ಇದನ್ನು ನಿರ್ಮಿಸಲಾಗುತ್ತದೆ. ಮುಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ತಿಳಿಸಿದರು.
     62 ಫ್ಲಾಟ್‌ಗಳಿರುವ ಗ್ರೀನ್ ಎವೆನ್ಯೂ ವಿಶಿಷ್ಟ ಸವಲತ್ತುಗಳನ್ನು ಹೊಂದಿರುತ್ತದೆ. ವಾತಾವರಣಕ್ಕೆ ಅನುಗುಣವಾಗಿ ಇದರಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ಕಟ್ಟಡದ ಒಳಗಡೆ ಬಿಸಿಯಾಗದಂತೆ ಟೆರೆಸ್‌ನಲ್ಲಿ ವಿಶೇಷ ಟೈಲ್ಸ್‌ನ್ನು ಅಳವಡಿಸಲಾಗುವುದು. ಅಲ್ಲದೆ ಸೋಲಾರ್, ಬಳಸಿದ ನೀರನ್ನು ಶುದ್ಧೀಕರಿಸಿ ಶೌಚಾಲಯ ಹಾಗೂ ಗಾರ್ಡನ್‌ಗಳಿಗೆ ಬಳಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಗ್ರೀನ್ ಎವೆನ್ಯೂ ನಮಗೆ ವಾಣಿಜ್ಯ ಯೋಜನೆಗಿಂತಲೂ ಹೆಚ್ಚಾಗಿ ತವರೂರಿಗಾಗಿ ನಿರ್ಮಿಸುತ್ತಿರುವ ಭಾವನಾತ್ಮಕ ಯೋಜನೆಯಾಗಿದೆ ಎಂದು ಸೈಯದ್ ಬ್ಯಾರಿ ನುಡಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com