ಕಾಣದಂತೆ ಮಾಯ ಮಾಡೋ ನಿಲುವಂಗಿ!

ಸುದ್ದಿ: ಮೈಗೊಂದು ವಿಶಿಷ್ಟ ಶಕ್ತಿಯಿರುವ ನಿಲುವಂಗಿ ಧರಿಸಿದರೆ ಸಾಕು. ನಿಲುವಂಗಿ ದೇಹದ ಯಾವೆಲ್ಲ ಭಾಗವನ್ನು ಮುಚ್ಚುತ್ತದೋ ಆ ಭಾಗಗಳು ಇನ್ನೊಬ್ಬರ ಕಣ್ಣಿಗೆ ಗೋಚರಿಸುವುದಿಲ್ಲ. ಕೇವಲ ತಲೆ ಮಾತ್ರ ಅತ್ತಿಂದಿತ್ತ ಚಲಿಸಿದಂತೆ ಕಾಣುತ್ತದೆ. ಇಂತಹ ದೃಶ್ಯವನ್ನು ನೀವು ಹ್ಯಾರಿ ಪಾಟರ್ ಸಿನಿಮಾಗಳಲ್ಲಿ ನೋಡಿರಬಹುದು. ಅಷ್ಟೇ ಅಲ್ಲ, ಇಂಥದ್ದೆಲ್ಲ ಸಿನಿಮಾಗಳಲ್ಲಿ ಮಾತ್ರವಷ್ಟೇ ಸಾಧ್ಯ ಎಂದೂ ಭಾವಿಸಿರಬಹುದು. ಆದರೆ ನಿಮ್ಮ ಯೋಚನೆ ಸುಳ್ಳಾಗಿದೆ. ಮಿ. ಇಂಡಿಯಾ ಸಿನಿಮಾದಲ್ಲಿ ವಾಚ್ ಧರಿಸಿದರೆ ಹೇಗೆ ಆ ಮನುಷ್ಯ ಅದೃಶ್ಯನಾಗುತ್ತಾನೋ ಅದೇ ರೀತಿ ಮನುಷ್ಯನನ್ನು ಅದೃಶ್ಯನನ್ನಾಗಿಸುವ ನಿಲುವಂಗಿಯನ್ನು  ಅಮೆರಿಕದ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಈ ನಿಲುವಂಗಿಯು ಕೇವಲ ಒಂದು ಮೈಕ್ರೋಮೀಟರ್‌ನಷ್ಟು ತೆಳುವಾಗಿದ್ದು, 3-ಡೈಮೆನ್ಶನಲ್ ವಸ್ತುಗಳನ್ನು ಅಡಗಿಸಿಡಬಲ್ಲುದು. ಇದನ್ನು ಧರಿಸಿದ ವ್ಯಕ್ತಿಯ ದೇಹ ಯಾರಿಗೂ ಕಾಣಿಸದು. ಎಕ್ಸ್‌ರೇ, ಮೈಕ್ರೋವೇವ್, ಬೆಳಕು, ಶಬ್ದದ ಅಲೆಗಳಿಂದ ಮಾತ್ರವೇ ಆ ವ್ಯಕ್ತಿಯ ದೇಹವನ್ನು ಗುರುತಿಸಲು ಸಾಧ್ಯ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com