ನ. 24 ಅಂತರ್‌ ಜಿಲ್ಲಾ ಮಟ್ಟದ ಕ್ವಿಜ್‌, ಚಿತ್ರಕಲಾ ಸ್ಪರ್ಧೆ

ಮೂಡಬಿದಿರೆ: ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನ. 24ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 5ನೇ ವರ್ಷದ ಅಂತರ್‌ ಜಿಲ್ಲಾ ಮಟ್ಟದ ಕ್ವಿಜ್‌ ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮೂರನೇ ವರ್ಷದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.
     'ನಾಲೆಜ್‌ ಬೇಸ್‌' ಲಾಂಛನದಡಿ 'ಮಾಸ್ಟರ್‌ ಮೈಂಡ್ಸ್‌' ಹೆಸರಿನಲ್ಲಿ ನಡೆಯುವ ಕ್ವಿಜ್‌ ಸ್ಪರ್ಧೆಯನ್ನು ರಾಷ್ಟ್ರಮಟ್ಟದ ಕ್ವಿಜ್‌ ಮಾಸ್ಟರ್‌ಗಳು ನಡೆಸಿಕೊಡಲಿದ್ದಾರೆ. 8, 9 ಹಾಗೂ 10ನೇ ತರಗತಿಗಳಿಂದ ತಲಾ ಒಬ್ಬರಂತೆ ಮೂವರ ತಂಡ (ಒಂದು ಶಾಲೆಯಿಂದ ಎಷ್ಟೂ ಸಂಖ್ಯೆಯ ತಂಡಗಳು) ಭಾಗವಹಿಸಬಹುದು. 'ಕಲರ್ ಆಫ್‌ ಇಂಡಿಯಾ' ಶೀರ್ಷಿಕೆಯಡಿ ಈ ಬಾರಿ 'ಕ್ಲೀನ್‌ ಇಂಡಿಯಾ - ಗ್ರೀನ್‌ ಇಂಡಿಯಾ' ಎಂಬ ವಿಷಯ ಇರಿಸಲಾಗಿದ್ದು, 5ರಿಂದ 10ವರ್ಷ, 10ರಿಂದ 15 ಹಾಗೂ 15 ವರ್ಷ ಮೇಲ್ಪಟ್ಟವರು ವಯಸ್ಸಿನ ಪ್ರಮಾಣ ಪತ್ರ ಸಹಿತ ಪಾಲ್ಗೊಳ್ಳಬಹುದು.
     ಕ್ವಿಜ್‌ನಲ್ಲಿ ಪಾಲ್ಗೊಳ್ಳುವವರು ಶಾಲೆಯ ಮುಖ್ಯಸ್ಥರ ಪತ್ರ ಒದಗಿಸಬೇಕು. ಆಕರ್ಷಕ ಬಹುಮಾನಗಳಿವೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com