ಚಕ್ರವರ್ತಿ ಸೂಲಿಬೆಲೆ ಕುಂದಾಪುರಕ್ಕೆ. ಕಾಂಗ್ರೆಸ್ ಪ್ರತಿಭಟನೆ ಎಚ್ಚರಿಕೆ

ಕುಂದಾಪುರ: ಶನಿವಾರ ಕುಂದಾಪುರದಲ್ಲಿ ಎ.ಎಸ್.ಎನ್ ಹೆಬ್ಬಾರರ ವೃತ್ತಿ ಜೀವನದ ೫೦ ವಸಂತಗಳು ಕಾರ್ಯಕ್ರಮ ನಡೆಯಲಿದ್ದು, ಆ ಕಾರ್ಯಕ್ರಮವನ್ನು ನಾವು ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾಗತಿಸುತ್ತದೆ. ಎ.ಎಸ್.ಎನ್. ಹೆಬ್ಬಾರ್‌ರವರು ಉಡುಪಿ ಜಿಲ್ಲೆಗೆ ನೀಡಿರುವ ಸಾಹಿತ್ಯ ಸೇವೆಯನ್ನು ಮರೆಯುವಂತಿಲ್ಲ. ಅವರೊಬ್ಬ ವಕೀಲರಾಗಿ, ಸಮಾಜಸೇವಕರಾಗಿ, ಭೃಷ್ಟಾಚಾರ ವಿರೋಧಿಯಾಗಿ ನೀಡಿರುವ ಕೊಡುಗೆಯ ಕುರಿತು ಅವರು ಬಗ್ಗೆ ಪಕ್ಷಕ್ಕೆ ಅಪಾರ ಗೌರವವಿದೆ. ಆದರೆ ಆ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸುತ್ತಿರುವ ಚಕ್ರವರ್ತಿ ಸೂಲಿಬೆಲೆಯವರನ್ನು ಕಟುವಾಗಿ ವಿರೋಧಿಸುತ್ತದೆ.
      ಚಕ್ರವರ್ತಿ ಸೂಲಿಬೆಲೆ ತನ್ನ ಬರವಣಿಗೆ ಹಾಗೂ ಭಾಷಣಗಳ ಮೂಲಕ ಕೋಮುವಾದದ ವಿಷವನ್ನು ದೇಶದ ಯುವಜನತೆಯಲ್ಲಿ ಬಿತ್ತುತ್ತಾ ದೇಶದ ಭವಿಷ್ಯವನ್ನು ಹಾಳುಗೆಡಗುವ ಕಾಯಕದಲ್ಲಿ ತೊಡಗಿದ್ದಾರೆ. ಇಡೀ ದೇಶದ ವರ್ತಮಾನ ಮತ್ತು ಇತಿಹಾಸದ ಬಗ್ಗೆ ಹಸಿಹಸಿ ಸುಳ್ಳುಗಳನ್ನು ಪ್ರಚುರಪಡಿಸುತ್ತಾ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ, ಮಹಾತ್ಮಾ ಗಾಂಧೀಜಿಯವರ ವಿರುದ್ಧ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಅವರ ಕುಟುಂಬದವರ ವಿರುದ್ಧ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ವಿರುದ್ಧ, ಕಾಂಗ್ರೆಸ್ ಪಕ್ಷದ ವಿರುದ್ಧ ತೀರಾ ಕೀಳುಮಟ್ಟದಲ್ಲಿ ಮಾತನಾಡುವ ಮೂಲಕ ದೇಶದ ಜನತೆಗೆ ತಪ್ಪು ಸಂದೇಶವನ್ನು ರವಾನಿಸುವ ಕೊಳಕು ರಾಜಕೀಯದಲ್ಲಿ ತೊಡಗಿದ್ದಾರೆ. ಆದ ಕಾರಣ ಕುಂದಾಪುರದಲ್ಲಿ ನಡೆಯುವ ಈ ಖಾಸಗಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಸಂಬಂಧಪಡದ ಅಥವಾ ಕಾಂಗ್ರೆಸ್ ನಾಯಕರ ಅಥವಾ ಕಾಂಗ್ರೆಸ್ ಪಕ್ಷದ ಕುರಿತು ಅವಹೇಳನಕಾರಿಯಾಗಿ ಸೂಲಿಬೆಲೆ ಮಾತನಾಡಿದಲ್ಲಿ ಸಭಾಂಗಣದ ಹೊರಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com