ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನಕ್ಕೆ ಶಿಲಾನ್ಯಾಸ

ಕೋಟ: ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕೋಟ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ನೂತನ ಶಿಲಾಮಯ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌ ನಿಧಿಧಿ ಕುಂಭ ಸ್ಥಾಪಿಸುವುದರ ಮೂಲಕ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ ನೀಡಿದರು. ವೇದಮೂರ್ತಿ ಮಧುಸೂಧನ ಬಾಯರಿ ಅವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನ ಜರುಗಿತು. ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಸ್ಥಾನದ ಧರ್ಮದರ್ಶಿ ಜಗದೀಶ ಕಾರಂತರು ಶಿಲಾನ್ಯಾಸ ನೇರವೇರಿಸಿದರು.

ನೂತನವಾಗಿ ಶಿಲಾಮಯ ತೀರ್ಥ ಮಂಟಪ, ಸುತ್ತುಪೌಳಿ, ಸ್ವಾಗತ ಗೋಪುರ, ಗರ್ಭಗುಡಿ, ಸಭಾಭವನ ಮುಂತಾದವುಗಳನ್ನು ನಿರ್ಮಿಸಿ ಜೀರ್ಣೋದ್ಧಾರಗೊಳಿಸುವ ಯೋಜನೆ ರೂಪಿಸಲಾಗಿದೆ.

ಈ ಸಂದರ್ಭ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್‌ ಸದಸ್ಯೆ ಸುನೀತ ರಾಜರಾಮ್‌, ತಾಲೂಕು ಪಂಚಾಯತ್‌ ಸದಸ್ಯ ಜಿ. ಭರತ್‌ಕುಮಾರ್‌ ಶೆಟ್ಟಿ, ರಾಘವೇಂದ್ರ ಕಾಂಚನ್‌ ಬಾರಿಕೆರೆ, ಕೋಟ ಗ್ರಾಮ ಪಂಚಾಯತ್‌ ಅದ್ಯಕ್ಷ ಶಿವ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶೋಭ ಪೂಜಾರಿ, ವ್ಯವಸ್ಥಾಪನ ಸಮಿತಿಯ ಸುಬ್ರಾಯ ಆಚಾರ್‌, ರಾಜು ದೇವಾಡಿಗ, ಸುಶೀಲಾ ಸೋಮಶೇಖರ್‌, ಭುಜಂಗ್‌ ಗುರಿಕಾರ್‌, ಕೋಟ ಚಂದ್ರ ಆಚಾರ್‌, ಮಾಜಿ ಜಿಲ್ಲಾ ಜಿಲ್ಲಾ ಪರಿಷತ್‌ ಅಧ್ಯಕ್ಷ ಕೇಶವ ಕುಂದರ್‌, ಕಾರ್ಯನಿರ್ವಹಣಾಧಿಧಿಕಾರಿ ಪುಷ್ಪಲತಾ, ವ್ಯವಸ್ಥಾಪನ ಸಮಿತಿಯ ಎಲ್ಲ ಸದಸ್ಯರು, ಅರ್ಚಕ ವರ್ಗ ಮತ್ತು ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com