ಶಾದಿ ಭಾಗ್ಯ: ಪರ, ವಿರೋಧದ ಮತೀಯ ರಾಜಕೀಯ ಸಮ್ಮತವಲ್ಲ

ಉಡುಪಿ: ಸರಕಾರದ ತೋರಿಕೆಯ ಶಾದಿ ಭಾಗ್ಯ ಯೋಜನೆ ಹಾಗೂ ಅದನ್ನು ವಿರೋಸುವ ನೆಪದಲ್ಲಿ ನಡೆಯುತ್ತಿರುವ ಮತೀಯ ರಾಜಕೀಯ ಎರಡೂ ಸಮುದಾಯಕ್ಕೆ ಸಮ್ಮತವಲ್ಲ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿದೆ. 

ರಾಜ್ಯ ಸರಕಾರ ಜಾರಿಗೊಳಿಸಿದ ಶಾದಿ ಭಾಗ್ಯ ಯೋಜನೆ ಮುಸ್ಲಿಂ ಸಮುದಾಯದ ನೈಜ ಸಮಸ್ಯೆಗಳಿಗೆ ಯಾವ ಪರಿಹಾರವನ್ನೂ ನೀಡದು. ಸರಕಾರ ಆಮಿಷಗಳ ಮೂಲಕ ಮುಸ್ಲಿಂ ಸಮುದಾಯವನ್ನು ದಿಕ್ಕು ತಪ್ಪಿಸುವ ರಾಜಕೀಯ ಮಾರ್ಗ ಅನುಸರಿಸುತ್ತಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. 

ಆದರೆ ಯೋಜನೆಯನ್ನು ವಿರೋಸುವ ನೆಪದಲ್ಲಿ ಕೋಮುವಾದಿಗಳು ಬಹುಸಂಖ್ಯಾತ ಸಮುದಾಯವನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವ ಯತ್ನದಲ್ಲಿ ತೊಡಗಿದ್ದಾರೆ. 

ಇದರ ಬದಲು ಮಹಿಳಾ ಶಿಕ್ಷಣ, ವೈದ್ಯಕೀಯ ನೆರವು ಸಹಿತ ಮೂಲಭೂತ ಅವಕಶ್ಯಕತೆ ಈಡೇರಿಸುವ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕು. ಸಾಚಾರ್ ಸಮಿತಿ ಶಿಫಾರಸು ಅನುಷ್ಠಾನಗೊಳಿಸಬೇಕು. ಸಾಂವಿಧಾನಿಕ ಹಕ್ಕು ಮುಸ್ಲಿಂ ಸಮುದಾಯಕ್ಕೆ ದಕ್ಕಬೇಕು ಎಂದು ಒಕ್ಕೂಟದ ಪತ್ರಿಕಾ ಹೇಳಿಕೆ ಒತ್ತಾಯಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com