ಮೋದಿ ಸಮಾವೇಶಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿ ವಿಲಾಸ್‌ ನಾಯಕ್‌ ಬೈಕ್‌ ಸವಾರಿ

ಉಡುಪಿ : ಬಿಜೆಪಿ ಯುವ ನಾಯಕ ಮತ್ತು ಉದ್ಯಮಿ ವಿಲಾಸ್‌ ನಾಯಕ್‌ ಅವರು ಒಂದು ವಿನೂತನ ಪ್ರಯತ್ನಕ್ಕಿಳಿದಿದ್ದಾರೆ.
    ಆದಿತ್ಯವಾರ ಬೆಂಗಳೂರಿನಲ್ಲಿ ನಡೆಯಲಿರುವ ನರೆಂದ್ರ ಮೋದಿಯ ಬೃಹತ್‌ ಸಮಾವೇಶಕ್ಕೆ ಕುಂದಾಪುರದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೆಂಗಳೂರಿಗೆ ಬೈಕ್‌ನಲ್ಲಿ ಪ್ರಯಾಣಿಸುವುದು.
      ವಿಲಾಸ್‌ ಅವರ ಈ ವಿನೂತನ ಸಾಹಸಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕುಂದಾಪುರದಿಂದ ಆರಂಭಗೊಂಡ ಈ ಬೈಕ್‌ ಜಾಥಾ ಉಡುಪಿಗೆ ಆಗಮಿಸುತ್ತಿದ್ದಂತೆಯೆ ಮಾಜಿ ಶಾಸಕರಾದ ರಘುಪತಿ ಭಟ್‌ ಸಹಿತ ಹಲವು ಬಿಜೆಪಿ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು.
    ಬಳಿಕ ಕರಾವಳಿ ಬೈಪಾಸ್‌ನಿಂದ ಚತುಷ್ಪಥ ರಸ್ತೆಯಲ್ಲಿ ಸಾಗಿ ಬಂದ ಜಾಥಾ ಕಲ್ಸಂಕ, ಕಡಿಯಾಳಿ, ಎಂಜಿಎಂ, ಇಂದ್ರಾಳಿ, ಮಣಿಪಾಲವನ್ನು ದಾಟಿ ಕಾರ್ಕಳದ ಕಡೆಗೆ ಸಾಗಿತು.

ಲಿಮ್ಕಾ ದಾಖಲೆಗೆ ಯತ್ನ
    ಬೆಂಗಳೂರಿನ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬೈಕ್‌ಗಳಲ್ಲಿ ಜಾಥಾ ಮೂಲಕ ತೆರಳುವ ಬಿಜೆಪಿ ನಾಯಕ ವಿಲಾಸ ನಾಯಕ್‌ ಅವರು ಲಿಮ್ಕಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲು ಸನ್ನದ್ಧರಾಗಿದ್ದಾರೆ. 
      ಸಮರ್ಥ ಶೆಣೈ ಅವರು 318 ಕಿ.ಮೀ. ದೂರವನ್ನು ನಿಲುಗಡೆ ಇಲ್ಲದೆ ಸಂಚರಿಸಿದ ಮತ್ತು ಇನ್ನೊಬ್ಬರು 40 ಗಂಟೆಗಳಲ್ಲಿ 450 ಕಿ.ಮೀ. ಕ್ರಮಿಸಿದ ದಾಖಲೆಗಳು ಇವೆ. ಇದರಲ್ಲಿ ಯಾವುದಾದರೂ ಒಂದನ್ನು ಸಾಧಿಸಲು ಯತ್ನಿಸಲಾಗುವುದು ಎಂದು ವಿಲಾಸ್‌ ನಾಯಕ್‌ ಹೇಳಿದ್ದಾರೆ. 
     ಉಡುಪಿ, ಕಾರ್ಕಳ, ಬೆಳ್ತಂಗಡಿ, ಗುರುವಾಯನಕೆರೆ, ಚಾರ್ಮಾಡಿ, ಮೂಡಿಗೆರೆ, ಹಾಸನವಾಗಿ ಬೆಂಗಳೂರಿಗೆ ತಲುಪಲಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com