ಪ್ರಶಸ್ತಿಗೆ ಅರ್ಜಿ ಆಹ್ವಾನ

ಉಡುಪಿ: ಕನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಬೆಂಗಳೂರಿನ 'ಅಭಿಮಾನಿ' ಪತ್ರಿಕಾ ಸಂಸ್ಥೆ ಮತ್ತು ಹಾಗೂ 'ಮೈಸೂರು ದಿಗಂತ' ಪತ್ರಿಕಾ ಸಂಸ್ಥೆಗಳು ದತ್ತಿಯಾಗಿ ಸ್ಥಾಪಿಸಿರುವ ವಾರ್ಷಿಕ ಪ್ರಶಸ್ತಿಗಳಾದ ಅಭಿಮಾನಿ ಪ್ರಶಸ್ತಿ (2012, 2013), ಮೈಸೂರು ದಿಗಂತ ಪ್ರಶಸ್ತಿಗೆ (2012, 2013) ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ತಿಳಿಸಿದ್ದಾರೆ.

ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಹಾಗೂ ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗುವುದು.

2012 ಮತ್ತು 2013ನೇ ಸಾಲಿನ ಪ್ರಶಸ್ತಿಗಾಗಿ ತಮ್ಮ ಸ್ವವಿವರಗಳನ್ನು ಬಿಳಿಹಾಳೆಯಲ್ಲಿ ಬರೆದು ಪ್ರತ್ಯೇಕವಾಗಿ ವರ್ಷವನ್ನು ದಾಖಲಿಸಿ ಆಯಾ ವರ್ಷದ ಅವಧಿಗೆ ಒಂದು ಲೇಖನವನ್ನು ಮಾತ್ರ ಕಳುಹಿಸಬೇಕು.

ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ. ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್‌) ಪ್ರಕಟವಾಗದಿದ್ದಲ್ಲಿ ಸಂಪಾದಕರಿಂದ ದೃಢೀಕರಣ ಪತ್ರ ಕಳುಹಿಸಬೇಕು.

ಲೇಖನ-ವರದಿಗಳನ್ನು ನ.25 ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್‌, ವಿಶ್ವೇಶ್ವರಯ್ಯ ಕೇಂದ್ರ, ಡಾ|ಬಿ.ಆರ್‌.ಅಂಬೇಡ್ಕರ್‌ ವೀಧಿ, ಬೆಂಗಳೂರು-560001 ಇಲ್ಲಿಗೆ ಕಳುಹಿಸಬೇಕು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com