ಮೋದಿ ಬ್ಯಾನರ್‌ಗೆ ಹಾನಿ; ಅಭಿಮಾನಿಗಳ ಆಕ್ರೋಶ

ಕುಂಭಾಸಿ: ಇಲ್ಲಿನ ಕುಂಭಾಸಿ ರಾ.ಹೆ 66 ಕುಂಭಾಸಿ ಹರಿಹರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಕುಂಭಾಸಿ ಮೋದಿ ಅಭಿಮಾನಿ ಬಳಗದವರು ಅಳವಡಿಸಿದ ಬ್ಯಾನರ್‌ ಕಿಡಿಗೇಡಿಗಳು ನ.22 ರಂದು ಹಾನಿಗೊಳಿಸಿದ ಘಟನೆ ಸಂಭವಿಸಿದೆ.

ಅಳವಡಿಸಲಾದ ಮೋದಿ ಸಂದೇಶವನ್ನು ಸಾರುವ ಬೃಹತ್‌ ಬ್ಯಾನರ್‌ನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಮಾತ್ರ ಯಾರೋ ಕೀಡಿಗೇಡಿಗಳು ಹರಿದು ತೆಗೆಯುವ ಮೂಲಕ ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ .

ಸ್ಥಳೀಯರ ಕೃತ್ಯ ? : ಇಲ್ಲಿನ ಕುಂಭಾಸಿ ವಿನಾಯಕ ನಗರದ ನಿವಾಸಿ ಉಮೇಶ್‌ ರಾತ್ರಿ ಅಮಲಿನ ಮತ್ತಿನಲ್ಲಿ ಈ ಕೃತ್ಯಕ್ಕೆ ಇಳಿದಿದ್ದಾನೆ ಎಂದು ಆರೋಪ ಕೇಳಿ ಬರುತ್ತಿದೆ ಈ ಬಗ್ಗೆ ಈಗಾಗಲೇ ಸಂಬಂದಪಟ್ಟವರು ಜಾಗೃತೆ ಹೇಳುವ ಮೂಲಕ ಹಾನಿ ಮಾಡಿರುವ ಮೋದಿ ಬ್ಯಾನರ್‌ರನ್ನು ನ.23ರ ಸಂಜೆ ಒಳಗೆ ಅಳವಡಿಸುವಂತೆ ಗಡುವು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಮೋದಿ ಅಭಿಮಾನಿಗಳ ಆಕ್ರೋಶ ; ಒಂದು ವೇಳೆ ಹಾನಿಗೊಳಿಸಿದ ಬ್ಯಾನರ್‌ನ್ನು ಪುನಃ ಅದೇ ಸ್ಥಳದಲ್ಲಿ ಯಥಾವತ್ತಾಗಿ ಅಳವಡಿಸದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಬೇರೆಯಾಗುವುದು ಎಂದು ಕುಂಭಾಸಿ ಮೋದಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com