ಮೊಗವೀರ ಕ್ರೀಡಾಕೂಟ: ಬೈಂದೂರು ಘಟಕಕ್ಕೆ ಚಾಂಪಿಯನ್‍ಶಿಫ್

ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಆತಿಥ್ಯದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಮೊಗವೀರ ಕ್ರೀಡಾಕೂಟ 2013ರಲ್ಲಿ ಮೊಗವೀರ ಯುವ ಸಂಘಟನೆ ಬೈಂದೂರು ಘಟಕ ಸಮಗ್ರ ಪ್ರಶಸ್ತಿಯೊಂದಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಸಮಾರೋಪ ಸಮಾರಂಭದಲ್ಲಿ ಕ್ರೀಡಾಳುಗಳನ್ನು ಹುರಿದುಂಬಿಸಿ, ಮಾತನಾಡಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕರಾದ ಡಾ.ಜಿ.ಶಂಕರ್ ಮಾತನಾಡಿ, ‘ಯುವ ಸಂಘಟನೆಗೆ ಅದ್ಬುತ ಶಕ್ತಿಯಿದೆ. ಈಗಾಗಲೇ ಸಾಮಾಜಿಕ ವಲಯದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ತೋರಿಸಿರುವ ಯುವ ಸಂಘಟನೆ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ, ಶಿಸ್ತಬದ್ದವಾಗಿ ನಡೆಸಿದೆ. ಸಮಾಜದ ಯುವಕ ಯುವತಿಯರು ಕ್ರೀಡೆಯಲ್ಲಿ ಕೂಡಾ ತಾವು ಕಡಿಮೆ ಇಲ್ಲ ಎನ್ನುವುದನ್ನು  ಸಾಧಿಸಿ ತೋರಿಸಿದ್ದಾರೆ’ ಎಂದರು.
  ಗೀತಾನಂದ ಫೌಂಡೇಶನ್ ಕೋಟ ಇದರ ಪ್ರವರ್ತಕರಾದ ಆನಂದ ಸಿ.ಕುಂದರ್ ಬಹುಮಾನ ವಿತರಿಸಿ, ಮಾತನಾಡಿ, ‘ಮೊಗವೀರ ಯುವ ಸಮುದಾಯದಲ್ಲಿ ಇಂದು ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿದೆ. ಜಿಲ್ಲಾ ಎಲ್ಲಾ ಮೊಗವೀರ ಕ್ರೀಡಾಳುಗಳನ್ನು ಒಂದುಗೂಡಿಸಿ ಅದ್ಭುತವಾಗಿ ಕ್ರೀಡಾಕೂಟವನ್ನು ಸಂಘಟಿಸಲಾಗಿದ್ದು, ಈ ಪಾಲ್ಗೊಳ್ಳುವಿಕೆಯ ಸಾಂಘಿಕತೆ ಒಗ್ಗಟ್ಟನ್ನು ಬಿಂಬಿಸುತ್ತದೆ. ಹೀಗೆ ನಿರಂತರವಾಗಿ ಯುವ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ, ಪ್ರೋತ್ಸಾಹ ಕೊಡುವ ಕೆಲಸವಾಗಬೇಕು’ ಎಂದರು.
ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಅಧ್ಯಕ್ಷ ಸದಾನಂದ ಬಳ್ಕೂರು ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಇದರ ಅಧ್ಯಕ್ಷ ಸುರೇಶ್ ಆರ್.ಕಾಂಚನ್, ಮೊಗವೀರ  ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷ ಎಂ.ಎಂ.ಸುವರ್ಣ, ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ ಟಿ.ಮೆಂಡನ್, ಮೊಗವೀರ ಯುವ ಸಂಘಟನೆ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಸತೀಶ ಎಂ.ನಾಯ್ಕ್, ಬಾರಕೂರು-ಬೆಣ್ಣೆಕುದ್ರು ಸಂಯುಕ್ತ ಸಭಾದ ಅಧ್ಯಕ್ಷ ವಿಶ್ವನಾಥ ಮಾಸ್ತರ್,ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕುಂದಾಪುರ ಪುರಸಭಾ ಸದಸ್ಯರಾದ ವಿಠಲ ಕುಂದರ್, ಉದಯ ಮೆಂಡನ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯ ಸಿ,ಕೋಟ್ಯಾನ್, ಕ್ರೀಡಾಕಾರ್ಯದರ್ಶಿ ರಮೇಶ್ ವಿ.ಕುಂದರ್,  ಸುರೇಶ ವಿಠಲವಾಡಿ ಉಪಸ್ಥಿತರಿದ್ದರು. 
ಕ್ರೀಡಾ ಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಗಳಾಗಿ ಧನುಷ್ ಕೆದೂರು (ಕೋಟೇಶ್ವರ ಘಟಕ), ಪ್ರವೀಣ್ (ಕೋಟ ಘಟಕ), ಬಾಲಕಿಯರ ವಿಭಾಗದಲ್ಲಿ ಚೇತನಾ (ಬಡಾನಿಡಿಯೂರು ಘಟಕ), ಪುರುಷರ ವಿಭಾಗದಲ್ಲಿ ಭವಿಷ್ ಕರ್ಕೆರಾ (ಬಡಾನಿಡಿಯೂರು ಘಟಕ), ಮಹಿಳಾ ವಿಭಾಗದಲ್ಲಿ ಮಹಿಮಾ ಜಿ.(ಉದ್ಯಾವರ) ಘಟಕ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಕ್ರೀಡಾಪಟು ಚೈತ್ರ ಸಾಲಿಗ್ರಾಮ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಗಣೇಶ ಕಾಂಚನ್ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಶಿವರಾಮ್ ಶ್ರೀಯಾನ್ ವಿಜೇತರ ಯಾದಿ ವಾಚಿಸಿದರು. ಮಹಿಷಾಸುರ ಮರ್ದಿನಿ ಮಾಸ ಪತ್ರಿಕೆಯ ಸಂಪಾದಕ ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಕಾರ್ಯದರ್ಶಿ ಗಣೇಶ ಮೆಂಡನ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕ್ರೀಡಾಕೂಟದ ವೀಕ್ಷಕ ವಿವರಣೆ ನೀಡಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com