ಉಡುಪಿ: ರಾಜ್ಯದಲ್ಲೇ ಬಾಲ್ಯ ವಿವಾಹ ಮುಕ್ತ ಜಿಲ್ಲೆ

ಕಳೆದ ಐದು ವರ್ಷಗಳಲ್ಲಿ ಉಡುಪಿ ರಾಜ್ಯದಲ್ಲೇ ಬಾಲ್ಯ ವಿವಾಹದ ಪಿಡುಗು ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ. 

2012ರಲ್ಲಿ ಬಾಲ್ಯ ವಿವಾಹವನ್ನು ಮಕ್ಕಳ ಸಹಾಯವಾಣಿ ಮೂಲಕ ಬಂದ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೂಲಕ ವಿವಾಹ ಪೂರ್ವದಲ್ಲೇ ತಡೆದಿದ್ದು, ಉಳಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವಲಸೆ ಕಾರ್ಮಿಕರಿರುವ ಪ್ರದೇಶ, ಗ್ರಾಮೀಣ ಭಾಗದಲ್ಲಿ ನಡೆಸಲು ಉದ್ದೇಶಿಸುವ ಬಾಲ್ಯ ವಿವಾಹದ ಕುರಿತ ದೂರು ಶಾಲೆ, ಸಮಾಜ ಸೇವಕರಿಂದ ಬಂದ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರು, ಬಿಇಒ ತೆರಳಿ ಕಾನೂನಿನ ಸಮಸ್ಯೆ ಹಾಗೂ ಅರಿವು, ತಿಳುವಳಿಕೆ ಮೂಡಿಸಲಾಗುತ್ತಿದೆ. 

ಕಾನೂನಿನ ಆಧಾರದಲ್ಲಿ ಕಟ್ಟು ನಿಟ್ಟಾಗಿ ಬಾಲ್ಯ ವಿವಾಹ ತಡೆಯುವುದಕ್ಕಿಂತಲೂ ಜನರಿಗೆ ಅರಿವು ನೀಡುವ ಮುಂಜಾಗರೂಕತಾ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ಮನವೊಲಿಸಲಾಗುತ್ತಿದೆ. 

ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ತಿಳಿವಳಿಕೆ, ಆರ್ಥಿಕ ಮುಂದುವರಿಕೆ ಜತೆಗೆ ಸಾಮಾಜಿಕ ವ್ಯವಸ್ಥೆ, ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣದಿರುವ ಪರಿಣಾಮವಾಗಿ ಉಡುಪಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿದೆ ಎನ್ನುತ್ತಾರೆ ಅಕಾರಿಗಳು. 

ಹೆಣ್ಣಿಗೆ 18 ಅಥವಾ 19 ವರ್ಷ ಹಾಗೂ ಗಂಡಿಗೆ 20 ವರ್ಷವಾಗಿದ್ದರೂ ಕಾನೂನು ಪ್ರಕಾರ ಮದುವೆಯಾಗುವುದು ಅಪರಾಧ. ಗಂಡಿಗೆ 21, ಹೆಣ್ಣಿಗೆ 18 ತುಂಬಿರಲೇಬೇಕು. ವಲಸೆ ಕಾರ್ಮಿಕರು, ಮೂಲ ನಿವಾಸಿ ಸಮುದಾಯಗಳಲ್ಲೂ ಬಾಲ್ಯ ವಿವಾಹ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಬಡತನ, ಅನಕ್ಷರತೆ, ಮೂಢನಂಬಿಕೆ, ಶೈಕ್ಷಣಿಕ ಸೌಲಭ್ಯ ಕೊರತೆ, ರಕ್ತ ಸಂಬಂಧ ಹಾಗೂ ಆಸ್ತಿ ಉಳಿಸಿಕೊಳ್ಳುವುದು, ಕಡಿಮೆ ವರದಕ್ಷಿಣೆ, ಸಾಮಾಜಿಕ ರಕ್ಷಣೆ, ಹಿರಿಯರ ಆಸೆ ಈಡೇರಿಕೆಯ ನೆಪಕ್ಕೆ ಬಾಲ್ಯ ವಿವಾಹವಾಗುವ, ಮಾಡಿಸುವ, ಭಾಗಿಯಾಗುವ ಅಪರಾಧಕ್ಕೆ ಎರಡು ವರ್ಷ ಜೈಲು ವಾಸ, ಒಂದು ಲಕ್ಷ ರೂ. ದಂಡ ಅಥವಾ ಎರಡನ್ನೂ ಅನುಭವಿಸಬೇಕಾದೀತು. ...... 
*  ಬಾಲ್ಯ ವಿವಾಹದ ಸುಳಿವು ಸಿಕ್ಕಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಿರ್ದೇಶಕರ ಕಚೇರಿ(080: 22252329, 22353776, 22355984, 22384138) ಸಂಪರ್ಕಿಸಬಹುದು. .... 

*  ಬಾಲ್ಯ ವಿವಾಹ ನಿಷೇಧಾಕಾರಿಗಳು ಯಾರ್ಯಾರು? ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಪರಿಶಿಷ್ಟ ಪಂಗಡಗಲ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಇಲಾಖೆ, ಕಂದಾಯ ಇಲಾಖೆ ಅಕಾರಿ. .... ಸಾಮಾಜಿಕ, ಆರ್ಥಿಕ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಮುಂದುವರಿದ ಜಿಲ್ಲೆಯಾಗಿದ್ದು ಸಾಮಾಜಿಕ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಸಾಮಾಜಿಕ ಪಿಡುಗಿನ ಪ್ರಮಾಣ ಕಡಿಮೆಯಿದೆ. 
-ಸದಾನಂದ ನಾಯಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ),

* ಉಡುಪಿ ತಾಲೂಕು. .... ಶಿಕ್ಷಣದ ಜತೆಗೆ ಕಾನೂನಿನ ಅರಿವೇ ಉಡುಪಿ ಜಿಲ್ಲೆ ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಲು ಮುಖ್ಯ ಕಾರಣ. ವೈದ್ಯಕೀಯ ಸವಲತ್ತು ಗ್ರಾಮೀಣ ಭಾಗದಲ್ಲೂ ಲಭ್ಯವಿದ್ದು ಪರಸ್ಪರ ಮಾಹಿತಿ ಲಭ್ಯವಾಗುತ್ತಿದೆ. ವಲಸೆ ಕಾರ್ಮಿಕರು, ಮೂಲನಿವಾಸಿ ಸಮುದಾಯದಲ್ಲೂ ಬಾಲ್ಯ ವಿವಾಹ ಪಿಡುಗಿಲ್ಲ. 
-ರಾಜೇಂದ್ರ ಬೇಕಲ್, ಉಪನಿರ್ದೇಶಕರು(ಪ್ರಭಾರ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.

ಎಸ್.ಜಿ. ಕುರ್ಯ ಉಡುಪಿ , ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com