ಹೊಸದಿಲ್ಲಿ: ಕನ್ನಡ ಸಂಸ್ಕೃತಿ ಸಮ್ಮೇಳನ

ಉಡುಪಿ: ಮಂಗಳೂರಿನ ಹೃದಯ ವಾಹಿನಿ ಬಳಗವು ಹೊಸದಿಲ್ಲಿಯ ಗಣೇಶ ಮಿತ್ರ ಮಂಡಳಿ ಸಹಯೋಗದೊಂದಿಗೆ ಹೊಸದಿಲ್ಲಿ ಕರ್ನಾಟಕ ಸಭಾಂಗಣದಲ್ಲಿ ಡಿ. 21 ಮತ್ತು 22ರಂದು 10ನೇ ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ. ಮಂಜುನಾಥ್‌ ಸಾಗರ್‌ ಮತ್ತು ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್‌ ಕರಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
     ಸಮ್ಮೇಳನದಲ್ಲಿ ನಾಡಿನ ಗಣ್ಯರು, ಕನ್ನಡಪರ ಚಿಂತಕರು, ಸಾಹಿತಿ, ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧಮಗೋಷ್ಠಿ, ಹೊರನಾಡು ಕನ್ನಡಿಗರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದವರು ತಿಳಿಸಿದರು.
      ಕಾರ್ಯದರ್ಶಿ ಯಾಕುಬ್‌ ಖಾದರ್‌ ಗುಲ್ವಾಡಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com