ಸಮವಸ್ತ್ರ ಸಮಾನತೆ ಮೂಡಿಸಲು ಸಹಕಾರಿಯಾದುದು

ಗಂಗೊಳ್ಳಿ: ಸಮವಸ್ತ್ರ ಎನ್ನುವುದು ಪ್ರತಿಷ್ಠೆಯ ಸಂಕೇತವಲ್ಲ. ಅದು ಮಕ್ಕಳಲ್ಲಿ ಸಮಾನತೆಯನ್ನು ಮೂಡಿಸಿ ನಾವೆಲ್ಲರೂ ಒಂದೇ ಎನ್ನುವ ಭಾವ ಮೂಡಿಸಲು ಸಹಕಾರಿಯಾದದ್ದು. ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಬೇಕಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊನ್ನಮ್ಮ ನಾಯಕ ಅವರು ಅಭಿಪ್ರಾಯ ಪಟ್ಟರು. ಅವರು ಇತ್ತೀಚೆಗೆ ಗುಜ್ಜಾಡಿಯ ಶಾಲೆಯಲ್ಲಿ ಜರುಗಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯ ಹಳೆ ವಿದ್ಯಾರ್ಥಿ ಸಂಘದಿಂದ ಗುಜ್ಜಾಡಿಯ ಅಂಗನವಾಡಿ ಮಕ್ಕಳಿಗೆ ನೀಡಲಾದ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದರು.         ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಲ್ಫ್ರೆಡ್ ಪಿಂಟೊ ಮತ್ತು ಕಾವ್ಯ ಶೇರುಗಾರ್ ಭಾಗವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಹರೀಶ ಮೇಸ್ತ, ಪ್ರಕಾಶ ಪೂಜಾರಿ, ಕೃಷ್ಣ ಗುಜ್ಜಾಡಿ ಅಂಗನವಾಡಿ ಪುಟಾಣಿಗಳಿಗೆ ಸಮವಸ್ತ್ರಗಳನ್ನು ವಿತರಿಸಿದರು. ಅ0ಗನವಾಡಿ ಕಾರ್ಯಕರ್ತೆ ರಾಧಾ ಬಾಯಿ  ಮತ್ತು ಸಹಾಯಕಿ ಮಾಲಿನಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಸವಿತಾ ಶೆಟ್ಟಿ  ಕಾರ್ಯಕ್ರಮ ನಿರ್ವಹಿಸಿದರು
                                 ವರದಿ - ನರೇಂದ್ರ ಎಸ್ ಗಂಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com