ಸೌರಶಕ್ತಿಗೆ ತೆರಿಗೆ ವಿನಾಯಿತಿ: ಹರೀಶ್‌ ಹಂದೆ ಒತ್ತಾಯ

ಉಡುಪಿ: ಸೌರಶಕ್ತಿಗೆ ಇತರೆ ಕೆಲವು ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ತೆರಿಗೆ ವಿನಾಯಿತಿ ನೀಡಬೇಕು ಎಂದು ಸೆಲ್ಕೋ ಸಂಸ್ಥಾಪಕ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹರೀಶ್‌ ಹಂದೆ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ನ.14ರಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೌರಶಕ್ತಿಯ ಮೇಲಿನ ವ್ಯಾಟ್‌ ತೆಗೆದು ತೆರಿಗೆ ಮುಕ್ತ ಉಪಕರಣವನ್ನಾಗಿ ಪರಿಗಣಿಸಬೇಕು. ಇದರಿಂದ ಹೆಚ್ಚು ಹೆಚ್ಚು ಜನ ಸೌರಶಕ್ತಿ ಬಳಸಲು ಅನುಕೂಲವಾಗುತ್ತದೆ ಎಂದರು.

ಸೆಲ್ಕೋ ಸಂಸ್ಥೆಯು 20 ವರ್ಷಗಳನ್ನು ಪೂರೈಸುತ್ತಿದ್ದು ಇದುವರೆಗೆ 2 ಲಕ್ಷಕ್ಕೂ ಅಧಿಕ ಮನೆಗಳಿಗೆ ಸೋಲಾರ್‌ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. 20ನೇ ವರ್ಷಾಚರಣೆ ಸಂದರ್ಭದಲ್ಲಿ ಯಕ್ಷಗಾನ, ಶಿಕ್ಷಣದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯಾದ್ಯಂತ ಸೌರಶಕ್ತಿಯ ಬಗ್ಗೆ ಆಂದೋಲನ ರೀತಿಯ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದರು.

ಸಂಸ್ಥೆಯ ಮೋಹನ ಹೆಗಡೆ, ಜಗದೀಶ ಪೈ, ಗುರುಪ್ರಕಾಶ ಶೆಟ್ಟಿ, ಸುರೇಶ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com